ಹೂವು ಹೊರಳುವುವು ಸೂರ್ಯನ ಕಡೆಗೆ
ನಮ್ಮ ದಾರಿ ಬರಿ ಚಂದ್ರನವರೆಗೆ
ಇರುಳಿನ ಒಡಲಿಗೆ, ದೂರದ ಕಡಲಿಗೆ
ಮುಳುಗಿದಂತೆ, ದಿನ ಬೆಳಗಿದಂತೆ
ಹೊರಬರುವನು ಕೂಸಿನ ಹಾಗೆ.
ಜಗದ ಮೂಸೆಯಲಿ ಕರಗಿಸಿ ಬಿಡುವನು
ಎಲ್ಲ ಬಗೆಯ ಸರಕು;
ಅದಕೆ ಅದರ ಗುಣದೋಷಗಳ೦ಟಿಸಿ
ಬಿಡಿಸಿ ಬಿಟ್ಟ ತೊಡಕು.
ಗಿಡದಿಂದುರುವ ಎಲೆಗಳಿಗೂ ಮುದ,
ಚಿಗುರುವಾಗಲೂ ಒಂದೇ ಹದ,
ನೆಲದ ಒಡಲಿನೊಳಗೇನು ನಡೆವುದೋ
ಎಲ್ಲಿ ಕುಳಿತಿಹನೋ ಕಲಾವಿದ !
ಬಿಸಿಲ ಧಗೆಯ ಬಸಿರಿನಿಂದಲೇ ಸುಳಿವುದು
ಮೆಲು ತಂಗಾಳಿಯು ಬಳಿಗೆ;
ಸಹಿಸಿಕೊಂಡ ಸಂಕಟವನು ಸೋಸಲು
ಬಂದೆ ಬರುವುದಾ ಗಳಿಗೆ.
ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ;
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ.
- ಚೆನ್ನವೀರ ಕಣವಿ
ವಸು, ಎಲೆಗಳು ನೂರಾರು, ಗೀತೆ ಬರೀರಿ
ReplyDeleteAbhijnaa, your song is ready.. sahitya sariyideyo, omme nodi heli. . http://kannadabhavageetegalu.blogspot.in/2012/05/blog-post.html
Delete- vasu
Re vasu nim bagge prajavani papernal odi nim e blog na search madidhe nim parichaya thumbha chanda unt ri
ReplyDeleteಅರೆ ಹೌದಾ, ಪ್ರಜಾವಾಣಿಯಲ್ಲಿ ನನ್ನ ಬ್ಲಾಗ್ ಬಗ್ಗೆ ಬಂದಿತ್ತಾ, ನನಗೇ ಗೊತ್ತಿಲ್ಲವಲ್ರೀ, ದಯವಿಟ್ಟು ಯಾವತ್ತಿನ ಪೇಪರ್ ತಿಳಿಸ್ತೀರಾ - ವಸು.
Delete