ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.
ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ
- ಡಿ. ಎಸ್. ಕರ್ಕಿ
Download this song
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ
ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.
ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.
ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ
- ಡಿ. ಎಸ್. ಕರ್ಕಿ
Download this song
'ನರನರವನೆಲ್ಲ ಹುರಿಗೊಳಿಸಿ ಹೊಸದು' ಎಂಬಲ್ಲಿ 'ಹೊಸದು', 'ಹೊಸೆದು' ಆಗಬೇಕು
ReplyDeleteThanks for correction
DeleteU r right sir...Thanks for the correction
Delete'ಮಾಂಗಲ್ಯಗೀತ' ಎಂಬಲ್ಲಿ 'ಗೀತ', ಗೀತೆ ಆಗಬೇಕು
Deleteಕಲ್ಪನೆಯ ಕಣ್ಣು ಹರಿವನಕ ಸಾಲು
Deletewhat is the meaning of ಹರಿವನಕ and ಹಿಡಿನೆನಪಾ
Shut up
Deleteಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು : ನಮ್ಮ ಕಲ್ಪನೆಯ ಶಕ್ತಿ ಎಲ್ಲಿಯವರೆಗೂ ನೋಡಬಹುದೋ , ಎಲ್ಲಿಯವರೆಗೆ ಆ ದೃಷ್ಟಿ ಹರಿಯುವುದೋ ಅಲ್ಲಿಯ ವರೆಗೆ ಸಲು ದೀಪಗಳನ್ನು ಹಚ್ಚಿ ಬೆಳಕನ್ನು ಬೀರುತ್ತೇವೆ
Deleteಕನ್ನಡದ ಭಾವಗೀತೆೆಗಳು ಕನ್ನಡ ದ ಗಿರಿಶಿಖರವಿದ್ದಹಾಗೆ
ReplyDeleteನಿಮ್ಮ ಪ್ರಯತ್ನ. ಹೀಗೆ ನಿರಂತರ ಸಾಗಲಿ ನಮ್ಮ ಪ್ರೋತ್ಸಾಹ ಖಂಡಿತವಾಗಿಯೂ ಇರುವುದು
ReplyDeleteThe most useless translation ever.
ReplyDeleteTranslation???? Sorry I didn't get you... Any way thank you for the reply...
DeleteIt is not a translation you moron. Obviously you are clueless. It is a bhavageethe, in kannada.
DeleteVasu good job. Please keep up the good work. You will always have my support.
You're a funny fellow.... U idiot it's not a translation...
DeleteDear Vasu, keep it up. You're always supported by us...
Sorry it's not translation it is bhavageete.
Deleteಜೈ ಕನ್ನಡಾಂಬೆ
ಜೈ ಕರ್ನಾಟಕ ಮಾತೆ
You are right sir
DeleteNanage idara bhavartha beku..aagutta
ReplyDeleteBahala olleya kelasa. Bhavageethegalu ondu bhaashege anarghya rathnagalu idea haage.
ReplyDeletethis lyrics very nice
ReplyDeleteHow can I add my poems here?
ReplyDeleteಹಿರಿನೆನಪಾ ಸರೀನಾ ಹಿಡಿನೆನಪಾ ಸರೀನಾ?
ReplyDeleteಹಿದಿನೆನಪ
DeleteSuper song I will try it
ReplyDeleteArtha madkondre e bhavageethe Alli estu bhavikhyathe mattu namma karunadina bagge samskruthi na geetheya moolaka sariddare, we are grateful for this song thanks for apploding this song 🙏
ReplyDeleteOne more stanza missing
ReplyDeleteI was asking this only from that time
ReplyDeleteI was asking this only from that time
ReplyDeleteNice lyrics
ReplyDeleteHacchevu Kannadada deepa lyrics
ReplyDelete