ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 15 December 2012

ನವೋದಯದ ಕಿರಣಲೀಲೆ / Navodayada kiranaleele

ನವೋದಯದ ಕಿರಣಲೀಲೆ
ಕನ್ನಡದೀ ನೆಲದ ಮೇಲೆ
ಶುಭೋದಯವ ತೆರೆದಿದೆ.

                                  ನದನದಿಗಳ ನೀರಿನಲ್ಲಿ
                                  ಗಿರಿವನಗಳ ಮುಡಿಗಳಲ್ಲಿ
                                  ಗಾನ ಕಲಾ ಕಾವ್ಯ ಶಿಲ್ಪ
                                  ಗುಡಿಗೋಪುರ ಶಿಖರದಲ್ಲಿ
                                  ಶುಭೋದಯವ ತೆರೆದಿದೆ.

ಮುಗ್ಧ ಜಾನಪದಗಳಲ್ಲಿ
ದಗ್ಧ ನಗರ ಗೊಂದಲದಲಿ
ಯಂತ್ರತಂತ್ರದ ಅಟ್ಟಹಾಸ
ಚಕ್ರಗತಿಯ ಪ್ರಗತಿಯಲ್ಲಿ
ಶುಭೋದಯವ ತೆರೆದಿದೆ.

                                  ಹಿರಿಯರಲ್ಲಿ ಕಿರಿಯರಲ್ಲಿ
                                  ಹಳಬರಲ್ಲಿ ಹೊಸಬರಲ್ಲಿ
                                  ನವಚೇತನದುತ್ಸಾಹದ
                                  ಚಿಲುಮೆಚಿಮ್ಮುವೆದೆಗಳಲ್ಲಿ
                                  ಶುಭೋದಯವ ತೆರೆದಿದೆ.

                                                                          - ಜಿ. ಎಸ್. ಶಿವರುದ್ರಪ್ಪ

Download this song

3 comments:

  1. ವಸು,
    ಒಂದೆರಡು ಸಣ್ಣ ಪುಟ್ಟ ತಪ್ಪುಗಳಿವೆ ಅನ್ನಿಸಿತು, ನಾನು ಕೇಳಿ ಕಲಿತ ಸಾಹಿತ್ಯಕ್ಕೂ, ನೀವು ಬರೆದಿರೋದಕ್ಕೂ. ಯಾವುದು ಸರಿ ನನಗೂ ತಿಳಿಯದು. ಒಮ್ಮೆ confirm ಮಾಡಿಕೊಳ್ಳಿ.

    ಗಾನ ಕಲಾ ಕಾವ್ಯ ಶಿಲ್ಪ == ಶಿಲ್ಪ ಕಲಾ ಗಾನ ಕಾವ್ಯ
    ದಟ್ಟನಗರ == ದಗ್ಧ ನಗರ

    ಹೈಸ್ಕೂಲು ದಿನಗಳಲ್ಲಿ ಹಾಡುತ್ತಿದ್ದ ಹಾಡಿದು. ಹಳೆಯ ದಿನಗಳ ನೆನಪು ಮಾಡಿಕೊಟ್ಟಿದ್ದಕ್ಕೆ ತುಂಬ ಧನ್ಯವಾದಗಳು :).

    ReplyDelete
    Replies
    1. "ದಗ್ಧ ನಗರ" ಬದಲಾಯಿಸಿದ್ದೇನೆ. ಆದರೆ ನಾನು ಕೇಳಿರುವ ಹಾಡಿನಲ್ಲಿ ಗಾನ ಕಲಾ ಕಾವ್ಯ ಶಿಲ್ಪ ಎಂದೇ ಇದೆ, ಆ ಹಾಡನ್ನೇ ಇಲ್ಲಿ ಅಪ್ ಲೋಡ್ ಮಾಡಿದ್ದೇನೆ ನೋಡಿ. ಮೂಲ ಕವನ ಸಂಕಲನ ಸಿಗುವುದೇನೋ ಹುಡುಕುತ್ತೇನೆ, ಅಲ್ಲಿಯವರೆಗೂ ಈ ಸಾಲನ್ನು ಬದಲಾಯಿಸುವುದು ಸರಿಯೋ ತಪ್ಪೋ ಗೊಂದಲವಾಗುತ್ತಿದೆ. ಹಾಗಾಗಿ ಹಾಗೇ ಬಿಟ್ಟಿದ್ದೇನೆ. ತಿದ್ದುಪಡಿ ತಿಳಿಸಿದ್ದಕ್ಕಾಗಿ ಧನ್ಯವಾದಗಳು - ವಸು.

      Delete
  2. ಶಿಲ್ಪ ಕಲಾ ಗಾನ ಕಾವ್ಯ ...ಸರಿಯಾದದ್ದು

    ReplyDelete