ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 8 June 2013

ಬಡವನಾದರೆ ಏನು ಪ್ರಿಯೆ / Badavanaadare Enu Priye

ಬಡವನಾದರೆ ಏನು ಪ್ರಿಯೆ ಕೈ ತುತ್ತು ತಿನಿಸುವೆ
ಎದೆಯ ತುಂಬ ಒತ್ತಿಕೊಂಡು ಮುತ್ತು ಮಳೆಯ ಸುರಿಸುವೆ

ನನ್ನ ಎದೆಯ ರಾಜ್ಯದಲ್ಲಿ ನೀನು ರಾಣಿಯಾಗುವೆ
ಪುಟ್ಟ ಗುಡಿಸಲಲ್ಲಿ ನಿನ್ನ ಪಟ್ಟದರಸಿ ಮಾಡುವೆ

ಉಳ್ಳವರ ಎದೆಗೆ ಒದ್ದು ಮೈ ಮಾನ ಮುಚ್ಚುವೆ
ರೆಟ್ಟೆ ಮೇಲೆ ಹೊತ್ತು ನಿನ್ನ ಜಗವ ಸುತ್ತಿ ತಣಿಸುವೆ

ಬೆವರು ಹರಿಸಿ ಹೂವ ಬೆಳೆಸಿ ಮುಡಿಯಲಿಟ್ಟು ನಗಿಸುವೆ
ಭುಜಕೆ ಭುಜವ ಹಚ್ಚಿ ನಿಂತು ತೋಳುಬಂಧಿ ತೊಡಿಸುವೆ

ಹರಿವ ನದಿಗೆ ಅಡ್ಡ ನಿಂತು ನಿನಗೆ ದಾರಿ ಮಾಡುವೆ
ಬಿಸಿಲು ಮಳೆಯ ಚಳಿಯ ನುಂಗಿ ನೆರಳು ಬೆಳಕು ಆಗುವೆ


* ರಚನೆ ಯಾರದ್ದೆಂದು ತಿಳಿದಿಲ್ಲ, ತಿಳಿಸಿದರೆ ತಿದ್ದುವೆ.


Download This Song

25 comments:

  1. ನನಗೆ ತಿಳಿದ ಮಟ್ಟಿಗೆ ಇದೊಂದು ಜಾನಪದ ಗೀತೆ.

    ReplyDelete
    Replies
    1. ರಚನೆ ಸತ್ಯಾನಂದ ಪಾತ್ರೋಟ
      ಇದು ಭಾವಗೀತೆ
      ರಾಜು ಅನಂತಸ್ವಾಮಿ ಗಾಯನ

      Delete
    2. ಇದು ಸತ್ಯಾನಂದ ಪಾತ್ರೋಟ ಎಂಬ ಕವಿಗಳ ರಚನೆ

      Delete
    3. ಇದು ಸತ್ಯಾನಂದ ಪಾತ್ರೋಟ ಎಂಬ ಕವಿಗಳ ರಚನೆ

      Delete
  2. ಅಲೆಯುತ್ತಾ ಅಲೆಯುತ್ತಾ ನಿಮ್ಮ ಬ್ಲಾಗಿಗೆ ಬೇಟಿ ನೀಡಿದೆ, ತುಂಬಾ ಚೆನ್ನಾಗಿದೆ. ಬಹಳ ಒಳ್ಳೆಯ ಪ್ರಯತ್ನ. ನಿನ್ನ ಈ ಉತ್ತಮ ಕೆಲಸ ಇನ್ನಷ್ಟು ಮುಂದುವರಿಯಲಿ.
    ವೇಳೆ ಸಿಕ್ಕರೆ ನನ್ನ ಬ್ಲಾಗಿಗೆ ಒಮ್ಮೆ ಬೇಟಿ ನೀಡಿ : http://shashikulal.blogspot.in/

    ReplyDelete
  3. Vasu, idhu SATYANANDA PATHROTA avra kavithe...

    -SAHYADRI NAGARAJ

    ReplyDelete
  4. howdu. . nagaraj sahyari. . sathya pathrot haadiddu. . adre rachne janapada sahithya.alve. .

    ReplyDelete
  5. ಅರೆ! ಮತ್ತದೇ ಗೊಂದಲ, ಜನಪದವೋ? ಭಾವಗೀತೆಯೋ? ಎಂದು, ನಾನು ಸತ್ಯಾನಂದ ಪಾತ್ರೋಟ ಅವರ ಹೆಸರು ಈ ಗೀತೆಯೊಂದಿಗೆ ಕೇಳಿದ್ದೇನೆ. ಇರಲಿ ಒಮ್ಮೆ ಖಚಿತ ಮಾಡಿಕೊಂಡು ಎಡಿಟ್ ಮಾಡುವೆ.

    ReplyDelete
  6. vasu if you dont mind.. ee hadugalu onlinenalli idre pls link kodi..

    ReplyDelete
  7. ಸತ್ಯಾನಂದ ಪಾತ್ರೋಟ ರವರ ರಚನೆ ಮೈಸೂರು ಅನಂತ ಸ್ವಾಮಿ ಗಾಯನ

    ReplyDelete
  8. Vasu, nimma blog nanage baradu bhoomiyalli neerinante sikkide..tumba dhanyavadagalu.. Facebook nalli nim blog na share madiddini..Bhavageete priyarige sahayavagali endu..Hope you don't mind. Adbhutavaada prayathna..

    ReplyDelete
  9. Nice song

    if you got time, plz visit my blog santosh9702.blogspot.in

    ReplyDelete
  10. Good work.. my hats off to u..

    ReplyDelete
  11. ಸತ್ಯಾನಂದ ಪಾತ್ರೋಟ ***
    *** ರಾಜು ಅನಂತಸ್ವಾಮಿ *** Writers of

    ReplyDelete
  12. So Nice Vasu .

    Bhaavana jeevi neevu _ Shubhavaagali...

    ReplyDelete
  13. ಸತ್ಯಾನಂದ ಪಾತ್ರೋಟ ರಚನೆ.
    ರಾಜು ಅನಂತ ಸ್ವಾಮಿ -ಗಾಯನ

    ReplyDelete
  14. Brother " coolie mado kalnanmakle hero Honda kelbekadre Nan en kelali kempi nimappana" e song edre upload madi

    ReplyDelete
  15. ಇದು ಭಾವಗೀತೆ
    ರಚನೆ : ಸತ್ಯಾನಂದ ಪಾತ್ರೋಟ

    ಗಾಯನ : ರಾಜು ಅನಂತಸ್ವಾಮಿ

    ReplyDelete