ನಿನ್ನ ಕಂಗಳ ಕೊಳದಿ ಬೆಳದಿಂಗಳಿಳಿದಂತೆ
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.
ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.
ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು
- ಎಮ್. ಎನ್. ವ್ಯಾಸ ರಾವ್
Download This Song
ನನ್ನೆದೆಯ ಕಡಲೇಕೆ ಬೀಗುತಿಹುದು?
ಸೂಜಿಗಲ್ಲಾಗಿರುವೆ ಸೆಳೆದು ನಿನ್ನಯ ಕಡೆಗೆ
ಗರಿಗೆದರಿ ಕನಸುಗಳು ಕಾಡುತಿಹುದು.
ಎದೆಗೆ ತಾಪದ ಉಸಿರು
ತೀಡಿ ತರುತಿದೆ ಅಲರು
ನಿನ್ನ ಹುಣ್ಣಿಮೆ ನಗೆಯು ಛೇಡಿಸಿಹುದು
ಬಳಿಗೆ ಬಾರದೆ ನಿಂತೆ
ಹೃದಯ ತುಂಬಿದೆ ಚಿಂತೆ
ಜೀವ ನಿನ್ನಾಸರೆಗೆ ಕಾಯುತಿಹುದು.
ನಾನೊಂದು ದಡದಲ್ಲಿ
ನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು
- ಎಮ್. ಎನ್. ವ್ಯಾಸ ರಾವ್
Download This Song
nanage "kaarirulige komalatheya_______chandrama, indeko modadaache mareyaagiruvaa" annuva bhavageethe bekitthu........thammalliddare kodalu sadyave?
ReplyDeleteನಾನೊಂದು ದಡದಲ್ಲಿ
ReplyDeleteನೀನೊಂದು ದಡದಲ್ಲಿ
ನಡುವೆ ಮೈಚಾಚಿರುವ ವಿರಹದಳಲು
ಯಾವ ದೋಣಿಯು ತೇಲಿ
ಎಂದು ಬರುವುದೋ ಕಾಣೆ
ನೀನಿರುವ ಬಳಿಯಲ್ಲಿ ನನ್ನ ಬಿಡಲು ........ಈ ಸಾಲುಗಳು ನನಗಿಷ್ಟವಾದವು......
"ವಸು" ಅವರೆ.. ನಿಮ್ಮ ಕನ್ನಡ ಸಾಹಿತ್ಯ ಪ್ರೀತಿಗೆ ನನ್ನ ಹೃದಯಪೂರ್ವಕ ನಮನ...
ReplyDeleteಅದ್ಭುತವಾದ ಸಾಹಿತ್ಯ, ರತ್ನಮಾಲಾ ಅವರ ಕಂಠಸಿರಿಯಲ್ಲಿ ಕೇಳಿದರೆ ಜೀವನ ಪಾವನ.
ReplyDeleteSuper
ReplyDelete