ಒಡೆದು ಬಿದ್ದ ಕೊಳಲು ನಾನು,
ನಾದ ಬರದು ನನ್ನಲಿ;
ವಿನೋದವಿರದು ನನ್ನಲಿ.
ಕಿವಿಯನೇಕೆ ತೆರೆಯುತಿರುವೆ?
ಎದೆಯೊಳೇನ ಬಯಸುತಿರುವೆ?
ದೊರೆಯದೇನೂ ನನ್ನಲಿ!
ನಲ್ಲೆ ಬಂದು ತುಟಿಗೆ ಕೊಳಲ
ನೊತ್ತಿ ಉಸುರ ಬಿಟ್ಟಳು;
ತನ್ನ ಒಲವಿನಿಂದ್ರಧನುವ
ಹರಿದು ಇಳಿದು ಬಿಟ್ಟಳು;
ಬಣ್ಣ ಬಣ್ಣದೆನಿತೋ ಹಾಡ
ನಿಲ್ಲಿ ಚೆಲ್ಲಿ ಕೊಟ್ಟಳು.
ಹಾಡಿ ಹಾಡಿ ಬೇಸರಾಗಿ
ನೆಲಕೆಸೆದಳು ಕೊಳಲನು;
ಇಂದು ಮೌನದುಸುಬಿನಲ್ಲಿ
ಹುಗಿದಳೆನ್ನ ಮನವನು.
ಕೊಳಲು ಬೇಸರಾಯಿತೇನೊ,
ಹೊಸ ಹಂಬಲ ಹಾಯಿತೇನೊ,
ಎದೆಯ ಗಾಯ ಮಾಯಿತೇನೊ,
ಬಿಸುಟೆದ್ದಳು ಕೊಳಲನು.
ಕಂಪು ಗಾಳಿ ಅಲೆ ಅಲೆ
ತೇಲಿ ಬರಲು ಮಲೆ ಮಲೆ
ಬಿದಿರ ಕೊಳಲ ಮಾಡಿ ಹಾಡಿ
ತೂಗುತಿರಲು ಹೊಂದಲೆ
ಒಡೆದ ಕೊಳಲ ಪಾಡ ನೋಡು;
ಇನ್ನೆಲ್ಲಿದೆ ಸುಗ್ಗಿ ಎಂದು
ಮಣ್ಣಿನಂತೆ ಮಲಗಿತು.
ಮುಗ್ಗಿ ಮುರುಟಿ ನಲುಗಿತು.
ಮನ ಯಮುನಾ ತೀರದಲ್ಲಿ
ಕುಣಿದು ಬರೆ ಸಮೀರನು,
ನೆಳಲಿನಿಂದಲೆದ್ದು ಬರಲು
ಗೋಪ ಗೋಪಿಕೆಯರು,
ಒಡೆದು ಬಿದ್ದ ಕೊಳಲ ಕೊಳಲು
ಬರುವನೊಬ್ಬ ಧೀರನು,
ಅಲ್ಲಿವರೆಗೆ ಮೃಣ್ಮಯ,
ಬಳಿಕ ನಾನು ಚಿನ್ಮಯ!
- ಎಮ್. ಗೋಪಾಲ ಕೃಷ್ಣ ಅಡಿಗ
ಇದು ಅಡಿಗರು ಬರೆದ ಕವನದ ಪೂರ್ಣಪಾಠ. - ವಸು
ನಾದ ಬರದು ನನ್ನಲಿ;
ವಿನೋದವಿರದು ನನ್ನಲಿ.
ಕಿವಿಯನೇಕೆ ತೆರೆಯುತಿರುವೆ?
ಎದೆಯೊಳೇನ ಬಯಸುತಿರುವೆ?
ದೊರೆಯದೇನೂ ನನ್ನಲಿ!
ನಲ್ಲೆ ಬಂದು ತುಟಿಗೆ ಕೊಳಲ
ನೊತ್ತಿ ಉಸುರ ಬಿಟ್ಟಳು;
ತನ್ನ ಒಲವಿನಿಂದ್ರಧನುವ
ಹರಿದು ಇಳಿದು ಬಿಟ್ಟಳು;
ಬಣ್ಣ ಬಣ್ಣದೆನಿತೋ ಹಾಡ
ನಿಲ್ಲಿ ಚೆಲ್ಲಿ ಕೊಟ್ಟಳು.
ಹಾಡಿ ಹಾಡಿ ಬೇಸರಾಗಿ
ನೆಲಕೆಸೆದಳು ಕೊಳಲನು;
ಇಂದು ಮೌನದುಸುಬಿನಲ್ಲಿ
ಹುಗಿದಳೆನ್ನ ಮನವನು.
ಕೊಳಲು ಬೇಸರಾಯಿತೇನೊ,
ಹೊಸ ಹಂಬಲ ಹಾಯಿತೇನೊ,
ಎದೆಯ ಗಾಯ ಮಾಯಿತೇನೊ,
ಬಿಸುಟೆದ್ದಳು ಕೊಳಲನು.
ಕಂಪು ಗಾಳಿ ಅಲೆ ಅಲೆ
ತೇಲಿ ಬರಲು ಮಲೆ ಮಲೆ
ಬಿದಿರ ಕೊಳಲ ಮಾಡಿ ಹಾಡಿ
ತೂಗುತಿರಲು ಹೊಂದಲೆ
ಒಡೆದ ಕೊಳಲ ಪಾಡ ನೋಡು;
ಇನ್ನೆಲ್ಲಿದೆ ಸುಗ್ಗಿ ಎಂದು
ಮಣ್ಣಿನಂತೆ ಮಲಗಿತು.
ಮುಗ್ಗಿ ಮುರುಟಿ ನಲುಗಿತು.
ಮನ ಯಮುನಾ ತೀರದಲ್ಲಿ
ಕುಣಿದು ಬರೆ ಸಮೀರನು,
ನೆಳಲಿನಿಂದಲೆದ್ದು ಬರಲು
ಗೋಪ ಗೋಪಿಕೆಯರು,
ಒಡೆದು ಬಿದ್ದ ಕೊಳಲ ಕೊಳಲು
ಬರುವನೊಬ್ಬ ಧೀರನು,
ಅಲ್ಲಿವರೆಗೆ ಮೃಣ್ಮಯ,
ಬಳಿಕ ನಾನು ಚಿನ್ಮಯ!
- ಎಮ್. ಗೋಪಾಲ ಕೃಷ್ಣ ಅಡಿಗ
ಇದು ಅಡಿಗರು ಬರೆದ ಕವನದ ಪೂರ್ಣಪಾಠ. - ವಸು
ನನಗನ್ನಿಸಿದ ಹಾಗೆ ೀ ಪದ್ಯದ ಕೊನೆಯ ಸಾಲು ......
ReplyDeleteಒಡೆದು ಬಿದ್ದ `ಕೊಳಲು' "ಕೊಳಲು"
ಬರುವನೊಬ್ಬ ಧೀರನು
ಅಲ್ಲಿವರೆಗೆ ಮೃಣ್ಮಯ ಬಳಿಕ ನಾನು ಚಿನ್ಮಯ
ಅದು ಕೊಳಲ ಕೊಳಲು ಸರಿ. ಅಂದರೆ ಕೊಳಲನ್ನು ತೆಗೆದುಕೊಳ್ಳಲು ತಂಗಾಳಿಯ ರೂಪದಲ್ಲಿ ಧೀರನೊಬ್ಬ ಬರುವನು.
Delete2014 Feb 7,8 & 9 randu, Bengalurina National College maidanadali 11 ne Sugama Sangeetha Sammelana. Adyakshate : Rathnamala Prakash.
ReplyDeleteNimma prayathakke, kannada kalajige thumbu hrudayada dhanyavadagalu..
ReplyDelete"ವಸು" ಅವರೆ.. ಕನ್ನಡ ಸಾಹಿತ್ಯ ಪ್ರೀತಿಗೆ ನನ್ನ ಹೃದಯಪೂರ್ವಕ ನಮನ...
ReplyDeleteThanks for sharing the lyrics.
ReplyDeletePlease to the new version of this song on YouTube. Link below:
https://youtu.be/fmZlnz05xIo