ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ
ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ
ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ
ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ
ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ
- ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ
"ವಸು" ಅವರೇ, ಭಾವಗೀತೆಗಳ ಸಂಗ್ರಹ ಒಂದೇ ಕಡೆ ಸಿಗುವಂತೆ ಮಾಡುತ್ತಿದ್ದೀರಿ. ಅಭಿನಂದನೆಗಳು. ನಿಮ್ಮ ಎರಡೂ ಬ್ಲಾಗ್ ನೋಡಿದ್ದೇನೆ. ಚೆನ್ನಾಗಿವೆ.
ReplyDeleteಯಾರಿಗಾಗಿ ಎಂಬ ಪ್ರಶ್ನೆಯೇ ಇಲ್ಲದೆ ಬರೆಯುತ್ತಿರಿ. ಬರೆಯಿರಿ, ಬರೆಯುತ್ತಲೇ ಇರಿ.
(ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ... ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ)
👍
ReplyDeleteಮೇಡಂ, ನಿಮ್ಮದು fb ಅಕೌಂಟ್ ಇದೆಯಾ?
ReplyDeleteಕನ್ನಡ ಭಾವಗೀತೆಗಳ ಪುಟ್ಟ ಪ್ರಪಂಚ ಇದು.. ನಂಗೆ ಗೊತ್ತಿಲ್ಲದ ಎಷ್ಟೋ ಗೀತೆಗಳನ್ನು Post ಮಾಡಿದ್ದಿರಿ. ಅನಂತ ಧನ್ಯವಾದಗಳು:)
ReplyDeleteThanks lot for beautiful poems u r sharing through u r website,hate offf
ReplyDeleteಧನ್ಯವಾದಗಳು, ಈ ಹಾಡನ್ನು ತುಂಬ ದಿನದಿಂದ ಹುಡುಕುತ್ತಿದ್ದೆ. ನಿಮ್ಮ ಪೋಸ್ಟ್ ಬಹಳ ಸಹಾಯ ಮಾಡಿತು.
ReplyDeletedhanyavadagalu
ReplyDelete