ರಚನೆ - ಕುವೆಂಪು
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ, ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ;
ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?
ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ!
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು
ಎಲ್ಲಿದ್ದರೆನಂತೆ->ಎಲ್ಲಿದ್ದರೇನಂತೆ
ReplyDeleteಗುರುದೆವನಾಣೆ->ಗುರುದೇವನಾಣೆ
(ತಿದ್ದಿದಮೇಲೆ ಈ ಕಮೆಂಟನ್ನು ತೆಗೆದುಬಿಡಿ)
ಕಮೆಂಟ್ ತೆಗೆಯುವ ಅಗತ್ಯವಿಲ್ಲ ವರುಣ್. ನಾನು ಇದನ್ನ ಇಲ್ಲಿವರೆಗೂ ಯಾಕೆ ಗಮನಿಸಿರಲಿಲ್ಲ ಅಂತ ಬೇಸರವಾಗುತ್ತಿದೆ ನನಗೆ. ತೋರಿಸಿಕೊಟ್ಟಿದ್ದಕ್ಕೆ Thank You. ಈ ಕಮೆಂಟನ್ನು ನಾನು ತೆಗೆಯುವುದಿಲ್ಲ, ಮತ್ತೆ ತಪ್ಪುಗಳು ಮರುಕಳಿಸದಂತೆ ಎಚ್ಚರವಾಗಿರಲು ಇವೆ ನನಗೆ ಸಹಕಾರಿ. Thanks again - ವಸು
ReplyDeleteಕುವೆಂಪು ಅವರ ಈ ಕವನ ಅಮೋಘ
Deleteಕುವೆಂಪು ಅವರ ಈ ಕವನ ಅಮೋಘ
Deleteಸಾಹಿತ್ಯ : ಕುವೆಂಪು
ReplyDeleteಗಾಯನ : ಬಿ.ಆರ್.ಛಾಯ
ಸೊಬಗಿನಾ ಸೆರೆಮನೆಯಾಗಿಹೆ ನೀನು
ಚೆಲುವೇ.....ಸರಸತಿಯೇ....
ಅದರಲಿ ಸಿಲುಕಿದಾ ಸೆರೆಯಾಳಾನು
ನನ್ನೆದೆಯಾರತಿಯೇ......
ನಿನ್ನೆಳೆ ಮೊಗದಲಿ ನಸುನಗೆಯಾಗಿರೆ ನನಗಿಹುದೊಂದಾಸೆ.....
ನಿನ್ನಾ ಮುಡಿಯಲಿ ಹೂವಾಗಿರುವುದು ನನಗಿನ್ನೊಂದಾಸೆ......
ತಾವರೆ ಬಣ್ಣದ ನಿನ್ನಾ ಹಣೆಯಲಿ ಕುಂಕುಮವಾಗಿರಲೆನಗಾಸೆ
ಬಳ್ಳಿಯಲೇಳಿಪ ನಿನ್ನಾ ಕೈಯ್ಯಲಿ ಹೊಂಬಳೆಯಾಗಿರಲೆನಗಾಸೆ
ಪದ್ಮವ ಮುಸುಕಿದ ರೇಸಿಮೆಯಂತಿಹ ಸೀರೆಯ ನಿರಿಯಾಗಿರುವಾಸೆ
ಮನವನು ಸೆಳೆಯುವ ನಿನ್ನಯ ನಡುವಿಗೆ ಕಟಿಬಂಧನವಾಗಿರುವಾಸೆ....{ಪಲ್ಲವಿ}
ನಿನ್ನಾ ಕೈಯ್ಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ
ನಿನ್ನೊಳು ನಾನು ನನ್ನೊಳು ನೀನು ಪ್ರೇಮದಿ ಲಯವಾಗುವುದಾಸೆ
ಚೆಲುವೆ...ಸರಳೆ...ಮುದ್ದಿನ ಹೆಣ್ಣೆ ನಿನ್ನವನಾನಾಗಿರುವಾಸೆ
ಇನ್ನೇನುಸುರಲಿ ಕಾಮನ ಕನ್ನೇ ನನಗಿನ್ನೇನೇನೋ ಆಸೆ.............{ಪಲ್ಲವಿ}
http://www.youtube.com/watch?v=Riy-W46QKNw
ಅನಿರೀಕ್ಷಿತ ಸಿನಿಮಾದಲ್ಲಿ ಈ ಕವಿತೆಯನ್ನು ಬಳಸಲಾಗಿದೆ ಮತ್ತು ಎಸ್ಪಿಬಿ ಅವರು ಹಾಡಿದ್ದಾರೆ😊
Deleteಸೊಗಸಾಗಿದೆ
ReplyDeleteAdbhuthavaada kaavya, prapanchadalli ella bhandavyakku artha sambhandagalu kattalaguvudilla. Jeevanadalli odagi baruva anubhandagalannu anubhavisudu mukhyave horathu adara parAmarshe mukhya valla
ReplyDeleteಅದ್ಭುತ ಸಂಗ್ರಹ☺️👌
ReplyDeleteಮುತ್ತಿನಂತಹ ಹಾಡನ್ನು ಜೋಡಿಸಿದ ಅವರಿಗೆ ಧನ್ಯವಾದಗಳು.....👍🏻
ReplyDeleteಸುಂದರವಾದ ಸಾಹಿತ್ಯ
ReplyDeleteತುಂಬಾ ಧನ್ಯವಾದಗಳು!
ReplyDeleteಧನ್ಯವಾದಗಳು
ReplyDelete