ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!
ಗಾಳಿ ಹೆಜ್ಜಿ ಹಿಡದ ಸುಗಂಧ ಅತ್ತ ಅತ್ತ ಹೋಗುವಂದ (೨)
ಹೋತ ಮನಸು ಅವನ ಹಿಂದ ಹಿಂದ ನೋಡದ ಗೆಳತಿ ಹಿಂದ ನೋಡದ ||
ನಂದ ನನಗ ಎಚ್ಚರಿಲ್ಲ ಮಂದಿಗೊಡವಿ ಏನ ನನಗ (೨)
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತಿ ಹಿಂದ ನೋಡದ ||
ಸೂಜಿ ಹಿಂದ ದಾರದ್ಹಾಂಗ ಕೊಳ್ಳದೊಳಗ ಜಾರಿದ್ಹಾಂಗ (೨)
ಹೋತ ಹಿಂದ ಬಾರದ್ಹಾಂಗ ಹಿಂದ ನೋಡದ ಗೆಳತಿ ಹಿಂದ ನೋಡದ ||
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!
- ಅಂಬಿಕಾತನಯದತ್ತ (ದ. ರಾ. ಬೇಂದ್ರೆ )
ree vasu avre Benre masthara ondu geete ide 'vishvamatheya charana sanjatha paramanu anu nanu'(correct agi kotthilla)dayavittu adannu blogigilisi
ReplyDeleteKavitha hesru nanu antha
DeleteThis comment has been removed by the author.
ReplyDeleteThis comment has been removed by the author.
ReplyDeleteಧನ್ಯವಾದಗಳು ವಸು ರವರೆ, ಎಷ್ಟೋ ಕಲಾವಿದರಿಗೆ ನಿಮ್ಮ ಈ ಪ್ರಯತ್ನ ದಾರಿದೀಪ. ನಿಮ್ಮ ಕಾಯಕ ಹೀಗೇ ಮುಂದುವರೆಯಲಿ. ನಟರಾಜ್ ಗೋಗಟೆ, ಕೊಪ್ಪ.
ReplyDeleteಧನ್ಯವಾದಗಳು ವಸು ರವರೆ, ಎಷ್ಟೋ ಕಲಾವಿದರಿಗೆ ನಿಮ್ಮ ಈ ಪ್ರಯತ್ನ ದಾರಿದೀಪ. ನಿಮ್ಮ ಕಾಯಕ ಹೀಗೇ ಮುಂದುವರೆಯಲಿ. ನಟರಾಜ್ ಗೋಗಟೆ, ಕೊಪ್ಪ.
ReplyDelete