ಈ ವಿರಹ ಕಡಲಾಗಿದೆ.. ನೀನಿರದೆ
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||
ಹೂಡಿದ ಹಸಿ ಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿ ನೆನಪೇ...
ಪ್ರೀತಿಯ ಸಿರಿ ವೀಣೆ ಮೀಟಿದೆ ಈ ಹೃದಯ
ಕುಂತಲ್ಲಿ ನಿಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಕೋರಿ ಬೇಡಿದೆ
ಸವಿ ನೆನಪೇ...
- ಪ್ರೊ. ದೊಡ್ಡರಂಗೇಗೌಡ
Download This Song
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||
ಹೂಡಿದ ಹಸಿ ಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
ಸವಿ ನೆನಪೇ...
ಪ್ರೀತಿಯ ಸಿರಿ ವೀಣೆ ಮೀಟಿದೆ ಈ ಹೃದಯ
ಕುಂತಲ್ಲಿ ನಿಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಕೋರಿ ಬೇಡಿದೆ
ಸವಿ ನೆನಪೇ...
- ಪ್ರೊ. ದೊಡ್ಡರಂಗೇಗೌಡ
Download This Song
ಈ ಕವಿತೆಯ ರಚನೆ ಯಾರದ್ದು?
ReplyDeleteನನಗೆ ಈ ಬಗ್ಗೆ ಮಾಹಿತಿ ಇದುವರೆಗೂ ಇರಲಿಲ್ಲ, ಸಾಹಿತ್ಯವನ್ನು ಗೆಳತಿ ಒದಗಿಸಿದ್ದಳಷ್ಟೇ.ಇದು ಪ್ರೊ. ದೊಡ್ಡರಂಗೇಗೌಡರ ಕವಿತೆ. - ವಸು
ReplyDelete