ಬಾರೆ ನನ್ನ ದೀಪಿಕಾ
ಮಧುರ ಕಾವ್ಯ ರೂಪಕ,
ಕಣ್ಣ ಮುಂದೆ ಸುಳಿಯೆ ನೀನು,
ಕಾಲದಾ ತೆರೆ ಸರಿದು ತಾನು,
ಜನುಮ ಜನುಮ ಜ್ಞಾಪಕ.
ನಿನ್ನ ಬೊಗಸೆಗಣ್ಣಿಗೆ,
ಕೆನ್ನೆ ಜೇನು ದೊನ್ನೆಗೆ,
ಸಮ ಯಾವುದೇ ಚೆನ್ನೆ ನಿನ್ನ
ಜಡೆ ಹರಡಿದ ಬೆನ್ನಿಗೆ?
ನಿನ್ನ ಕನಸು ಬಾಳಿಗೆ,
ಧೂಪದಂತೆ ಗಾಳಿಗೆ,
ಬೀಸಿ ಬರಲು ಜೀವ ಹಿಗ್ಗಿ,
ವಶವಾಯಿತೆ ದಾಳಿಗೆ.
ಮುಗಿಲ ಮಾಲೆ ನಭದಲಿ,
ಹಾಲು ಪೈರು ಹೊಲದಲಿ,
ರೂಪಿಸುತಿದೆ ನಿನ್ನ ಪ್ರೀತಿ
ಕವಿತೆಯೊಂದ ಎದೆಯಲಿ.
- ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ
ಭಟ್ಟರ ಎಲ್ಲಾ ಹಾಡುಗಳನ್ನು ಒ೦ದೇ ಕಡೆ ಕ್ರೋಢೀಕರಿಸುವ ನಿಮ್ಮ ಯತ್ನಕ್ಕೆ ಧನ್ಯವಾದಗಳು. ಇದು ನನ್ನ ಅಚ್ಚುಮೆಚ್ಚಿನ ಹಾಡುಗಳಳೊ೦ದು.
ReplyDeleteನಿಮ್ಮ ಪ್ರಯತ್ನ ನಿಜಕ್ಕೂ ತುಂಬ ಜನರಿಗೆ ಉಪಯುಕ್ತವಾಗಲಿದೆ. ಈ ಬರವಣಿಗೆ ನಿರಂತರವಾಗಿ ಹೀಗೇ ಮುಂದುವರೆಯಲಿ. ನಿಮಗೆ ಶುಭವಾಗಲಿ....
ReplyDeleteಸಮ ಯಾವುದೇ ಚೆಲ್ವೆ ನಿನ್ನ ಜಡೆ ಹರಡಿದ ಬೆನ್ನಿಗೆ !! (ಶೃಂಗಾರ ರಸವನ್ನು ಅಸಭ್ಉಯವಾಗಿಸದೆ ಉಕ್ಕಿ ಚೆಲ್ಲಿಸುವ ಈ ಪರಿಯಂತೂ - ಅಮೋಘ )
ReplyDelete