ರಚನೆ ; ದ. ರಾ. ಬೇಂದ್ರೆ.
೧
ಮುಗಿಲ ಮಾರಿಗೆ ರಾಗರತಿಯ ನಂಜ ಏರಿತ್ತ
ಆಗ ಸಂಜೆ ಆಗಿತ್ತ;
ನೆಲದ ಅಂಚಿಗೆ ಮಂಜಿನ ಮುಸುಕು ಹ್ಯಾಂಗೋ ಬಿದ್ದಿತ್ತ
ಗಾಳಿಗೆ ಮೇಲಕ್ಕೆದ್ದಿತ್ತ .
೨
ಬಿದಿಗಿ ಚಂದ್ರನ ಚೊಗಚೀ-ನಗಿ-ಹೂ ಮೆಲ್ಲಗ ಮೂಡಿತ್ತ
ಮ್ಯಾಲಕ ಬೆಳ್ಳಿನ ಕೂಡಿತ್ತ;
ಇರುಳ ಹೆರಳಿನಾ ಅರಳಮಲ್ಲಿಗೀ ಜಾಳಿಗಿ ಹಾಂಗೆತ್ತ
ಸೂಸ್ಯಾವ ಚಿಕ್ಕಿ ಅತ್ತಿತ್ತ.
೩
೩
ಬೊಗಸಿಗಣ್ಣಿನಾ ಬಯಕೆಯ ಹೆಣ್ಣು ನೀರಿಗೆ ಹೋಗಿತ್ತ
ತಿರುಗಿ ಮನೀಗೆ ಸಾಗಿತ್ತ;
ಕಾಮಿ ಬೆಕ್ಕಿನ್ಹಾಂಗ ಭಾ0ವೀ ಹಾದಿ ಕಾಲಾಗಸುಳಿತಿತ್ತ
ಎರಗಿ ಹಿಂದಕ್ಕುಳಿತಿತ್ತ.
೪
ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ
ಎರಗಿ ಹಿಂದಕ್ಕುಳಿತಿತ್ತ.
೪
ಮಳ್ಳಗಾಳಿ-ಸುಳಿ ಕಳ್ಳ ಕೈಲೆ ಸೆರಗನು ಹಿಡಿದಿತ್ತ
ಮತಮತ ಬೆರಗಿಲೆ ಬಿಡತಿತ್ತ;
ಒಂದ ಮನದ ಗಿಣಿ ಹಿಂದ ನೆಳ್ಳಿಗೆ ಬನ್ನಿಲೆ ಬರತಿತ್ತ
ತನ್ನ ಮೈಮರ ಮರತಿತ್ತ
o gret
ReplyDeletenange thumba ista aayitu
ತುಂಬಾ ಒಳ್ಳೆಯ ಭಾವಗೀತೆ....
ReplyDeletehummmm hrudayasparshi
ReplyDeleteadbhutha geethe
ReplyDeleteOne of my favorite song
ReplyDeleteOne of my favorite song
ReplyDeletegood song
ReplyDeletegood song
ReplyDeleteಈ ಗೀತೆಯ ಭಾವಾರ್ಥ ಬೇಕಾಗಿತ್ತು
ReplyDeleteYoutube ಅಲ್ಲಿ ಕೇಳಿ ಅರ್ಥವಾಗುತ್ತೆ
DeleteLove you Bendre...
ReplyDeleteSuperrrrr......
ReplyDeleteReally awesome lyrics
ReplyDeleteI like this song
ReplyDeleteಈ ಭಾವಗೀತೆ ಕೇಳುವಾಗ ಭಾವ ತುಂಬಿ ಬಂತು
ReplyDeleteಶೃಂಗಾರದ ಸುಳಿಗೆ ಬೊಗಸೆಗಣ್ಣಿನ ಹೆಣ್ಣು ಸಿಲುಕಿಕೊಂಡಿದ್ದಾಳೆ .
ReplyDeleteಈ ಹಾಡಿನ ಭಾವಾರ್ಥ ಬೇಕು..
ReplyDeleteತುಂಬಾ ಅರ್ಥಗರ್ಭಿತ ಹಾಡು 👌
ReplyDeleteSuperrrrr.
ReplyDelete