ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ
ಚಿಂತೆ ಬಿಡಿ ಹೂವ ಮುಡಿದಂತೆ
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ
ಜೀವದಲಿ ಜಾತ್ರೆ ಮುಗಿದಂತೆ || ಮೊದಲ ದಿನ ಮೌನ ||
ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು
ಮೂಗುತಿಯ ಮಿಂಚು ಒಳಹೊರಗೆ
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು
ಬೇಲಿಯಲಿ ಹಾವು ಹರಿದಂತೆ || ಮೊದಲ ದಿನ ಮೌನ ||
ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ
ಹೂವಿಗೂ ಜೀವ ಬಂತಂತೆ
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ || ಮೊದಲ ದಿನ ಮೌನ ||
- ಕೆ. ಎಸ್. ನರಸಿಂಹ ಸ್ವಾಮಿ
- ಕೆ. ಎಸ್. ನರಸಿಂಹ ಸ್ವಾಮಿ
This comment has been removed by the author.
ReplyDeleteThanks for posting.
ReplyDeleteBeautiful lyrics. I guess, kannadada kampu Bere yaava bhaasheyallu Illa.
noorakke nooru sathya
Deletenoorakke nooru sathya
DeleteMeaningful and beautiful lyrics. Thanks for posting
ReplyDeleteಹಾಡಿನ ಎರಡನೇ ಸಾಲಿನಲ್ಲಿ ಬರುವ "ಹತ್ತುಕಡೆ ಕಣ್ಣು" ಪದವನ್ನು ನಾನು "ಅತ್ತು ಕಡೆಗಣ್ಣು" ಎಂದು ಓದಿದ ನೆನಪು. ಜೊತೆಗೆ ಇದು ಮುಂದಿನ ಪದಗಳಿಗೆ ತಾಳೆಯೂ ಆಗುತ್ತದೆಯಲ್ಲವೇ... ಇದು ನನ್ನ ಅಭಿಪ್ರಾಯ ಮಾತ್ರ, ತಪ್ಪು ಕಂಡುಹಿಡಿಯುವ ಪ್ರಯತ್ನವಲ್ಲ.
ReplyDeleteಎಲ್ಲಾರ ಕಣ್ಣು ಹೊಸದಾಗಿ ಬಂದ ಹೆಣ್ಣಿನ ಮೇಲೆ. ಅದನ್ನು ಹತ್ತು ಕಡೆ ಕಣ್ಣು ಅಂತ ಹೇಳಿದ್ದಾರೆ. ಸಣ್ಣಗೆ ದೀಪ ಉರಿದಂತೆ ಎಂದರೆ ದೀಪವನ್ನು ನೇರ ನೋಡಲಿಕ್ಕಾಗುವುದಿಲ್ಲ ಹಾಗೆ ಎಲ್ಲರೂ ಈಕೆಯನ್ನು ನೋಡುತ್ತಿರುತ್ತಾರೆ ಆದರೆ ಇವಳು ಎಲ್ಲರನ್ನು ನೋಡಲಿಕ್ಕಾಗುವುದಿಲ್ಲ
Deleteಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.