ಆನಂದಮಯ ಈ ಜಗ ಹೃದಯ, ಏತಕೆ ಭಯ ಮಾಣೋ..
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...
ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...
- ಕುವೆಂಪು
ಸೂರ್ಯೋದಯ ಚಂದ್ರೋದಯ, ದೇವರ ದಯ ಕಾಣೋ...
ಆನಂದಮಯ ಈ ಜಗ ಹೃದಯ...
ಬಿಸಿಲಿದು ಬರಿ ಬಿಸಿಲಲ್ಲವೋ, ಸೂರ್ಯನ ಕೃಪೆ ಕಾಣೋ.
ಸೂರ್ಯನು ಬರಿ ರವಿಯಲ್ಲವೋ, ಆ ಭ್ರಾಂತಿಯ ಮಾಣೋ.
ಆನಂದಮಯ ಈ ಜಗ ಹೃದಯ...
ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...
ಉದಯದೊಳೇನ್ ಹೃದಯವ ಕಾಣ್, ಅದೇ ಅಮೃತದ ಹಣ್ಣೋ.
ಶಿವ ಕಾಣದೆ ಕವಿ ಕುರುಡನೋ, ಶಿವ ಕಾವ್ಯದ ಕಣ್ಣೋ.
ಆನಂದಮಯ ಈ ಜಗಹೃದಯ...
- ಕುವೆಂಪು
ವಸು ಅವರೇ ,
ReplyDeleteಭಾವಗೀತೆಗಳನ್ನು ಪ್ರಕಟಿಸುತ್ತಿರುವ ನಿಮ್ಮ ಈ ಪ್ರಯತ್ನಕ್ಕೆ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಈ ಭಾವಗೀತೆಯ ಸಾಲಿನ ಬಗ್ಗೆ ನನ್ನದೊಂದು ಸಣ್ಣ ಅನಿಸಿಕೆ.
ರವಿವದನವೇ ಶಿವಸದನವೋ, ಬರಿ ಕಣ್ಣದು ಮಣ್ಣೋ.
ಶಿವನಿಲ್ಲದೆ ಸೌಂದರ್ಯವೇ, ಶವಮುಖದಾ ಕಣ್ಣೋ.
ಆನಂದಮಯ ಈ ಜಗ ಹೃದಯ...
ಶಿವಮೊಗ್ಗ ಸುಬ್ಬಣ್ಣನವರು ಈ ಭಾವಗೀತೆ ಹಾಡಿರುವುದನ್ನು ಕೇಳಿದ್ದೇನೆ. ಅದರಲ್ಲಿ ಶವಮುಖದಾ ಹೊನ್ನೋ ಎಂದು ಹಾಡಿದ್ದಾರೆ. ನಿಮಗೆ ಖಾತ್ರಿ ಯಾವುದು ಅಂತ ತಿಳಿಸಿ.
ಇಲ್ಲ ಗೌಡ್ರೆ ಅದು ಶವ ಮುಖದ ಕಣ್ಣೋ ಎನ್ನುವುದಾಗಿಯೇ ಬರೆದಿದ್ದಾರೆ ಕುವೆಂಪುರವರು. ಶಿವನಿಲ್ಲದ ಸೌನ್ದರ್ಯವನ್ನು ಶವದ ಕಣ್ಣು ಇದ್ದಹಾಗೆ ಎಂಬುದು ಇದರ ಭಾವಾರ್ಥ
Deleteನಿಮ್ಮ ಅನಿಸಿಕೆಗೆ ಧನ್ಯವಾದಗಳು. ಈ ಗೀತೆಯ ಮೂಲ ಕ್ಯಾಸೆಟ್ ನನ್ನ ಬಳಿ ಇಲ್ಲ. ನಾನು (http://www.musicindiaonline.com/album/171-Kannada_Bhaava_Geethe/27155-Anandamaya_Vol_30/#/album/171-Kannada_Bhaava_Geethe/27155-Anandamaya_Vol_30/) ಈ ತಾಣದಲ್ಲಿ ಹಾಡನ್ನು ಕೇಳಿದ್ದೇನೆ ಅಷ್ಟೇ.
ReplyDeleteಅದರಲ್ಲಿ ಶವಮುಖದಾ ಕಣ್ಣೋ ಅಂತಲೇ ಹಾಡಿದ್ದಾರೆ, ಇನ್ನೂ ಖಾತ್ರಿ ಬೇಕಿದ್ದರೆ ನಾನು ಮೂಲ ಕವನ ಸಂಕಲನವನ್ನು ಹುಡುಕುವ ಪ್ರಯತ್ನ ಮಾಡುತ್ತೇನೆ, ಸ್ವಲ್ಪ ಸಮಯ ನೀಡಿ, ತಿಳಿಸುತ್ತೇನೆ.
ಕವಿ ಕುವೆಂಪು ಅವರು ಬರೆದಿರುವಂತೆ ಹಾಡಿದ್ದಾರೆ. ಶವಮುಖದಾ ಕಣ್ಣೋ ಎಂಬುದೇ ಸರಿ.ಅಂದರೆ ಜೀವಂತಿಕೆಯಿಲ್ಲದ್ದು ಎಂದರ್ಥ.......ನಮಗೆ ಹೊನ್ನೋ ಎಂದು ಕೇಳಿಸಬಹುದೇನೊ...ಅದು ಗ್ರಹಣದೋಷ ಅಷ್ಟೆ.
ReplyDeleteಮಂಜುರಾಜ್ ಹೆಚ್ಚೆನ್, ಕೆ ಆರ್ ನಗರ
ವಸು ಅವರೆ ಈ ಸಾಹಿತ್ಯ ನಿಮಗೆ ಸುಲಭವಾಗಿ ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ ದಯವಿಟ್ಟು ಸ್ವಲ್ಪ ಸಮಯ ತೆಗೆದುಕೊಂಡು ಇದರ ಭಾವಾರ್ಥವನ್ನು ಸೇರಿಸಿದರೆ ನಮ್ಮಂತವರಿಗೆ ತುಂಬ ಸಹಾಯಕವಾಗಿರುತ್ತದೆ
ReplyDeleteಈ ಕವಿತೆಯಲ್ಲಿ ಮಾಣೋ ಎಂಬ ಪದದ ಅರ್ಥ ತಿಳಿಸುವಿರಾ?
ReplyDeleteBhavarta send madi
ReplyDeletemano andare bidu leave antha artha. howdu it is shava mukhada kanno? kuvempuravara rachane
ReplyDeleteಅಮೃತದ ಹಣ್ಣು ಯಾವುದು
ReplyDeleteShivanillada ಸೌಂದರ್ಯ ಎಂಥದ್ದು?
ReplyDeleteಶಿವ ಸದನ ಇದು ಯಾವ ಸಮಾಸ
ReplyDeleteತತ್ಪುರುಷ ಸಮಾಸ
Delete