ರಚನೆ : ಪ್ರೊ || ದೊಡ್ಡರಂಗೇಗೌಡ
ಅಸೀಮರೂಪಿ ಅಂಬರದಲ್ಲಿ ಮುಂಗಾರು ಮೂಡಿದೆ |
ವಸುಂಧರೆಯ ಹೂಮೈಯಲ್ಲಿ ಹೊನ್ನಾರು ಕೂಡಿದೆ |
ಮಸೆವ ಬಿಸಿಲು ಮಾಗಿರುವಲ್ಲಿ ಮಂದಹಾಸ ತುಂಬಿದೆ |
ಹಸಿದ ರೈತ ಸಂಕುಲದಲ್ಲಿ ಹೊಸ ಆಸೆ ಹಾಡಿದೆ ||
ಅಗಮ್ಯ ನೆಲೆಯ ಕಾನನದಲ್ಲಿ ಹರಿದ್ವರ್ಣ ತೂಗಿದೆ |
ಅದಮ್ಯ ಸಿರಿಯ ಸಂಭ್ರಮದಲ್ಲಿ ಜೀರುಂಡೆ ಕೂಗಿದೆ |
ವರುಣ ಬರುವ ಆವೇಶದಲ್ಲಿ ದುಂಧುಭಿ ಮೊಳಗಿದೆ |
ಹರುಷ ತರುವ ಮಾರುತನಲ್ಲಿ ಮಣ್ಣಿನ ಕಂಪಿದೆ ||
ಅನನ್ಯ ಬಗೆಯ ಬಾಂದಳದಲ್ಲೂ ಸಂತೋಷ ಹೊಮ್ಮಿದೆ |
ಅನಿತ್ಯ ಬದುಕ ಗೊಂದಲದಲ್ಲೂ ಉನ್ಮಾದ ಚಿಮ್ಮಿದೆ |
ಅಸಂಖ್ಯ ಹೊದರ ತರುಲತೆಯಲ್ಲೂ ಲಾವಣ್ಯ ನಿಂತಿದೆ |
ಅನೂಹ್ಯ ಪದರ ಕಾರ್ಮುಗಿಲಲ್ಲೂ ಹೂಮಳೆಯ ಸಂಚಿದೆ ||
ಮಹಾಪೂರ ನಿರೀಕ್ಷೆಯಲ್ಲೂ ಕಾತರವೇ ಕಾಡಿದೆ |
ಗರಿಕೆ ಚಿಗುರ ಅಂಕುರದಲ್ಲೂ ಆನಂದ ತುಂಬಿದೆ |
ಹೊಸಾನೇಗಿಲ ಮುನ್ನಡೆಯಲ್ಲೂ ಋತುಮಾನದಾ ರಂಗಿದೆ |
ನವಮಾನವ ಮುನ್ನೊಟದಲ್ಲೂ ಕಾಲಚಕ್ರ ಉರುಳಿದೆ ||
good job, congrats
ReplyDeleteFantastic
ReplyDeleteExcellent
ReplyDeleteLovely beuty
ReplyDeleteThanks so much for sharing lyrics
ReplyDeleteTq u for wonderful.song ......
ReplyDeleteತುಂಬಾ ಸುಂದರವಾದ ಸಾಹಿತ್ಯ.ಶಿವಮೊಗ್ಗ ಸುಬ್ಬಣ್ಣ ರವರು ಬಹಳ ಚೆನ್ನಾಗಿ ಹಾಡಿದ್ದಾರೆ
ReplyDeleteCan you please send that video or audio.
DeleteThank you