ಮುನಿಸು ಥರವೇ ಮುಗುದೆ
ಹಿತವಾಗಿ ನಗಲು ಬಾರದೆ ||
ಕರಿಮುಗಿಲ ಬಾನಿನಲ್ಲಿ ಮಿಂಚರಳಲು
ತಾರೆಗಳು ಮೈಯ ಬಳಸಿ ಝುಮ್ಮೆನ್ನಲು |
ನವಭಾವ ತುಂಬಿ ತುಂಬಿ ಮನ ಹಾಡಲು
ತೆರೆದಂತಿದೆ ಭಾಗ್ಯದ ಬಾಗಿಲು ||
ಎಷ್ಟೊಂದು ಕಾಲದಿಂದ ಹಂಬಲಿಸಿದೆ
ನೀ ಬಂದು ಸೇರಿ ನನ್ನ ಮುದಗೊಳಿಸಿದೆ |
ಜೀವನದ ನೂರು ಕನಸು ನನಸಾಗಿದೆ
ಮುನಿಸೇತಕೆ ಈ ಬಗೆ ಮೂಡಿದೆ ||
ಹೊಸಬಾಳ ಬಾಗಿಲಲ್ಲಿ ನಾವೀದಿನ
ನಿಂತಿರುವ ವೇಳೆಯಲ್ಲಿ ಏಕೀ ಮನ |
ವಾಗರ್ಥವಾದಂತೆ ನಮ್ಮ ಈ ಮೈಮನ
ಜತೆಸೇರಲು ಜೀವನ ಪಾವನ ||
- ಸುಬ್ರಾಯ ಚೊಕ್ಕಾಡಿ.
ಇದು ಸುಬ್ರಾಯ ಚೊಕ್ಕಾಡಿಯವರು ಬರೆದದ್ದು....
ReplyDeleteಧನ್ಯವಾದಗಳು. - ವಸು.
Delete