ರಚನೆ : ಕೆ.ಎಸ್. ನರಸಿಂಹ ಸ್ವಾಮಿ
ಅತ್ತಿತ್ತ ನೋಡದಿರು, ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು, ಮಗುವೆ;
ಜೋ ಜೋಜೋ ಜೋ ಜೋ ಜೋಜೋ ಜೋ
ಸುತ್ತಿ ಹೊರಳಾಡದಿರು, ಮತ್ತೆ ಹಠ ಹೂಡದಿರು.
ನಿದ್ದೆ ಬರುವಳು ಕದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ.
ಮಲಗು ಚೆಲ್ವಿನ ತೆರೆಯೆ, ಮಲಗು ಒಲ್ಮೆಯ ಸೆರೆಯೆ,
ಮಲಗು ತೊಟ್ಟಿಲ ಸಿರಿಯೆ, ದೇವರಂತೆ;
ಮಲಗು ಮುದ್ದಿನ ಗಿಣಿಯೆ, ಮಲಗು ಮುತ್ತಿನ ಮಣಿಯೆ,
ಮಲಗು ಚಂದಿರನೂರ ಹೋಗುವೆಯಂತೆ .
ತಾರೆಗಳ ಜರತಾರಿಯಂಗಿ ತೊಡಿಸುವರಂತೆ
ಚಂದಿರನ ತಂಗಿಯರು ನಿನ್ನ ಕರೆದು;
ಹೂವ ಮುಡಿಸುವರಂತೆ, ಹಾಲ ಕುಡಿಸುವರಂತೆ,
ವೀಣೆ ನುಡಿಸುವರಂತೆ ಸುತ್ತ ನೆರೆದು.
ಬಣ್ಣ ಬಣ್ಣದ ಕನಸು ಕರಗುವುದು ಬಲುಬೇಗ;
ಹಗಲು ಬರುವನು ಬೆಳ್ಳಿ ಮುಗಿಲ ನಡುವೆ
ಚಿನ್ನದಂಬಾರಿಯಲಿ ನಿನ್ನ ಕಳುಹುವರಾಗ
ಪಟ್ಟದಾನೆಯ ಮೇಲೆ ಪುಟ್ಟ ಮಗುವೆ.
ಅತ್ತಿತ್ತ ನೋಡದಿರು ಅತ್ತು ಹೊರಳಾಡದಿರು
ನಿದ್ದೆ ಬರುವಳು ಹೊದ್ದು ಮಲಗು ಮಗುವೆ
ಜೋ ಜೋಜೋ ಜೋ ಜೋ ಜೋಜೋ ಜೋ
ಜೋ ಜೋಜೋ ಜೋ ಜೋ ಜೋಜೋ ಜೋ
This comment has been removed by the author.
ReplyDeleteಈ ಕಾಮೆಂಟನ್ನು ರಿಮೂವ್ ಮಾಡಿದ್ದಕ್ಕೆ ಕಾರಣ ಏನು. ಕಾಮೆಂಟ್ ಏನಿತ್ತು ತಿಳಿಸಬಹುದಾ
Deleteಈ ಕಾಮೆಂಟನ್ನು ರಿಮೂವ್ ಮಾಡಿದ್ದಕ್ಕೆ ಕಾರಣ ಏನು. ಕಾಮೆಂಟ್ ಏನಿತ್ತು ತಿಳಿಸಬಹುದಾ
Deleteಕೆ.ಎಸ್ ನರಸಿಂಹಸ್ವಾಮಿ ಅವರು ತುಂಬ ಸುಂದರವಾಗಿ ಈ ಸಾಹಿತ್ಯವನ್ನು ರಚಿಸಿದ್ದಾರೆ. ಇದನ್ನು ಇಲ್ಲಿ ಸೇರಿಸಿದವರಿಗೆ ಧನ್ಯವಾದಗಳು.
ReplyDeleteಸೊಗಸಾದ ಜೋಗುಳದ ಹಾಡು .ಮಕ್ಕಳಿಗ್ಯಾಕೆ ,ಕೇಳುವ ಅಡಲ್ಟ್ಗಳಿಗೂ ನಿದ್ದೆ ಬರುತ್ತೆ .ಅಷ್ಟು ಪರಿಣಾಮಕಾರಿಯಾಗಿರುವ ಹಾಡಿದು .
ReplyDelete,,,,👌👌👌👌👌
ReplyDelete