ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday, 24 October 2011

ಮೂಡುತ ರವಿ ರಂಗು ತಂದೈತೆ / Mooduta ravi rangu tandaite

ಮೂಡುತ ರವಿ ರಂಗು ತಂದೈತೆ,
ಓಡುತ ನದಿ ಹಾಡು ನೀಡೈತೆ,
ಬೆಟ್ಟದ ಮ್ಯಾಗೆ, ಕಟ್ಟೆಯ ಮ್ಯಾಗೆ,
ಗಾಳಿ ತೀಡೈತೆ.

ಬೆಳ್ಳಕ್ಕಿ ಸಾಲು ತೇಲಿ ತೇಲಿ ಪಲ್ಲಕ್ಕಿ ತೂಗೈತೆ
ಮಲ್ಲಿಗೆ ತೋಟ ಮಿಂಚಿ ಮಿಂಚಿ ಬೆಳ್ಳಗೆ ಹೊಳೆದೈತೆ
ಕಾಡಿನ ಜಾಡು ಕಂಪು ಇಂಪು
ಒಟ್ಟಿಗೆ ಕೂಡೈತೆ.

ಹಕ್ಕಿಯ ಮೇಳ ಕೂಗಿ ಕೂಗಿ ಹತ್ತಿರ ಕರೆದೈತೆ
ಕುಂಕುಮ ಧೂಳಿ ಮೇಲಕ್ಕೇರಿ ಸಿಂಧೂರ ಇಟ್ಟೈತೆ
ಕಣ್ಣಾರೆ ಕಂಡ ನೋಟದೂಟ
ಸಂತೋಷ ಸವಿದೈತೆ.

6 comments:

  1. Replies
    1. ಸುಮಾರು ಒಂದು ೨೦ ವರ್ಷಗಳ ನಂತರ ಈ ಹಾಡು ನೆನಪಿಗೆ ಬಂತು,
      ನನ್ನ ಅಣ್ಣ ಗುನುಗುನಿಸುತ್ತಾ ಇದ್ದ ಹಾಡು ಇದು, ಗೂಗಲ್ ಮಾಡ್ದಾಗ ಸಿಕ್ಕ ಮೊದಲನೇ ಹುಡುಕಾಟವೇ ಇದು.
      ಅಪ್‌ಲೋಡ್ ಮಾಡಿದ್ದಿಕ್ಕೆ ತುಂಬಾ ಧನ್ಯವಾದಗಳು.

      ನಾನೂ ಸಹ ಭದ್ರಾ ನದಿಯ ತೀರದಲ್ಲಿ ಹುಟ್ಟಿದವನು ಆದರೆ ಈಗ ಕಾಲಿಗೆ ರೆಕ್ಕೆ ಸುತ್ತಿಕೊಂಡು ಪ್ರಪಂಚ ಸುತ್ತುವ ಕೆಲಸ

      Delete
  2. ನಂಜನಗೂಡಿನಲ್ಲಿ ನಂಜುಂಡ ಸ್ವಾಮಿಗೆ ಶಿವರಾತ್ರಿ ಉತ್ಸವವು
    ಕಪಿಲೆಯ ಕರೆಯಲು ನಿಂತಿರುವ ಈಶನಿಗೆ ಬೆಳ್ಳಿರಥ ಉತ್ಸವವು

    ಈ ಮೇಲಿನ ಸಂಪೂರ್ಣ ಹಾಡು ಯಾರಿಗಾದರೂ ತಿಳಿದಿದ್ದರೆ ದಯವಿಟ್ಟು ಅಪ್ಲೋಡ್ ಮಾಡಿ.

    ಧನ್ಯವಾದಗಳು

    ReplyDelete
  3. i sang this song in my school 20 years back. Happy to see this here today

    ReplyDelete