ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Tuesday, 14 August 2012

ಆಕಾಶಕ್ಕೆದ್ದು ನಿಂತ.... ನಾವು ಭಾರತೀಯರು / Akaashakkeddu ninta

ಸ್ವಾತಂತ್ರ್ಯೋತ್ಸವದ ಶುಭಾಶಯಗಳೊಂದಿಗೆ -

ಆಕಾಶಕ್ಕೆದ್ದು ನಿಂತ ಪರ್ವತ ಹಿಮ ಮೌನದಲ್ಲಿ
ಕರಾವಳಿಗೆ ಮುತ್ತನಿಡುವ ಬೇರ್ದೆರೆಗಳ ಗಾನದಲ್ಲಿ
ಬಯಲ ತುಂಬ ಹಸಿರ ದೀಪ ಹಚ್ಚಿ ಹರಿವ ನದಿಗಳಲ್ಲಿ
ನೀಲಿಯಲ್ಲಿ ಹೊಗೆಯ ಚೆಲ್ಲಿ ಯಂತ್ರಘೋಷವೇಳುವಲ್ಲಿ
ಕಣ್ಣು ಬೇರೆ ನೋಟವೊಂದು ನಾವು ಭಾರತೀಯರು.

ನಾಡಿನೆಲ್ಲ ಗಡಿಗಳಲ್ಲಿ ಬಾನಿನಲ್ಲಿ ಕಡಲಿನಲ್ಲಿ
ನಮ್ಮ ಯೋಧರೆತ್ತಿ ಹಿಡಿದ ನಮ್ಮ ಧ್ವಜದ ನೆರಳಿನಲ್ಲಿ
ಒಂದೆ ನೆಲದ ತೊಟ್ಟಿಲಲ್ಲಿ ಬೆಳೆದ ನಮ್ಮ ಕೊರಲಿನಲ್ಲಿ
ನಮ್ಮ ಯುಗದ ದನಿಗಳಾಗಿ ಮೂಡಿದೆಲ್ಲ ಹಾಡಿನಲ್ಲಿ
ಭಾಷೆ ಬೇರೆ ಭಾವವೊಂದು ನಾವು ಭಾರತೀಯರು

ನಾಡಿಗಾಗಿ ತನುವ ತೆತ್ತ ಹುತಾತ್ಮರ ಸ್ಮರಣೆಯಲ್ಲಿ
ನಮ್ಮ ಕಷ್ಟದಲ್ಲೂ ನೆರೆಗೆ ನೆರಳನೀವ ಕರುಣೆಯಲ್ಲಿ
ದಾರಿ ಬಳಸಿ ಏರುವಲ್ಲಿ ಬಿರುಗಾಳಿಯೆ ಮೊಳಗುವಲ್ಲಿ
ನಮ್ಮ ಗುರಿಯ ಬೆಳಕಿನೆಡೆಗೆ ನಡೆವ ಧೀರ ಪಯಣದಲ್ಲಿ
ಎಲ್ಲೇ ಇರಲಿ ನಾವು ಒಂದು ನಾವು ಭಾರತೀಯರು.

                                                               - ಕೆ. ಎಸ್. ನರಸಿಂಹ ಸ್ವಾಮಿ.

3 comments:

  1. ಯುನೈಟೆಡ್ ಸ್ಟೇಟ್ ಮತ್ತು ಇಡೀ ಜಗತ್ತಿಗೆ ಜ್ಞಾನೋದಯದ ಶ್ರೇಷ್ಠ ಕ್ರಮದಿಂದ ಶುಭಾಶಯಗಳು, ನಿಮ್ಮ ಕಳೆದುಹೋದ ಕನಸುಗಳನ್ನು ನೀವು ಪುನಃ ಪಡೆದುಕೊಳ್ಳಲು ಮತ್ತು ಸಂಪತ್ತು ಮತ್ತು ಸಂತೋಷದ ಬೆಳಕನ್ನು ನೀವು ಎಲ್ಲಿ ನೋಡಬಹುದು ಎಂದು ಪ್ರಬುದ್ಧರ ಫೆಲೋಶಿಪ್ಗೆ ಸೇರಲು ಇದು ಮುಕ್ತ ಅವಕಾಶವಾಗಿದೆ. ಯಾವುದೇ ರಕ್ತ ತ್ಯಾಗವಿಲ್ಲದೆ. ಎಲ್ಲಾ ಹೊಸ ಸದಸ್ಯರು ಭ್ರಾತೃತ್ವಕ್ಕೆ ಸೇರಿದಾಗ ಅವರನ್ನು ಪಡೆಯಲು ನಾವು 50,000 550,000 ಮೊತ್ತವನ್ನು ಪಾವತಿಸುತ್ತೇವೆ ಮತ್ತು ಅವರ ಆಯ್ಕೆಯ ಮತ್ತು ಸ್ಥಳದ ಹೂಡಿಕೆಯೊಂದಿಗೆ ಹೂಡಿಕೆಯೊಂದಿಗೆ ಅವರು ಪ್ರಸಿದ್ಧರಾಗಲು ಜೀವನದಲ್ಲಿ ಈ ಅವಕಾಶವಿದೆ.

    ಬೆಳಕಿನಲ್ಲಿ ಸೇರುವ ಹೊಸ ಸದಸ್ಯರಿಗೆ ನೀಡುವ ಪ್ರಯೋಜನಗಳು.
    1. 50,000 550,000 ರಿವಾರ್ಡ್ ನಗದು.
    2. US 150,000 USD ಮೌಲ್ಯದ ಹೊಸ ನಯವಾದ ಡ್ರೀಮ್ CAR
    3. ನಿಮ್ಮ ಆಯ್ಕೆಯ ದೇಶದಲ್ಲಿ ಖರೀದಿಸಿದ ಕನಸಿನ ಮನೆ.
    ವಿಶ್ವದ 5 ಅತ್ಯುತ್ತಮರೊಂದಿಗೆ ಸಮಾಲೋಚನೆಯ ಒಂದು ತಿಂಗಳು.
    ನಾಯಕರು ಮತ್ತು ವಿಶ್ವದ 5 ಪ್ರಮುಖ ವ್ಯಕ್ತಿಗಳು. ನಿಮಗೆ ಆಸಕ್ತಿ ಇದ್ದರೆ, ದಯವಿಟ್ಟು ಹಿಂದಿನ ಇಮೇಲ್ ವಿಳಾಸ = illuminatiworldwideorder@gmail.com ಅಥವಾ ನಮ್ಮ wahtsapp +15184145254 ಅನ್ನು ಸಂಪರ್ಕಿಸಿ



    https://www.gaia.com/article/what-is-the-illuminati

    ReplyDelete
  2. ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ

    ReplyDelete
  3. This comment has been removed by the author.

    ReplyDelete