ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday, 29 August 2012

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು / Dharegavatarisida svargada spardhiyu

ಧರೆಗವತರಿಸಿದ ಸ್ವರ್ಗದ ಸ್ಪರ್ಧಿಯು
ಸುಂದರ ತಾಯ್ನೆಲವು, ನಮ್ಮೀ ತಾಯ್ನೆಲವು.
ದೇವಿ ನಿನ್ನಯ ಸೊಬಗಿನ ಮಹಿಮೆಯ
ಬಣ್ಣಿಸಲಸದಳವು.
                                                        ..... ನಮ್ಮೀ ತಾಯ್ನೆಲವು.

ಧವಳ ಹಿಮಾಲಯ ಮುಕುಟದ ಮೆರುಗು
ಕಾಲ್ತೊಳೆಯುತಲಿದೆ ಜಲಧಿಯ ಬುರುಗು
ಗಂಗಾ ಬಯಲಿನ ಹಸಿರಿನ ಸೆರಗು
ಕಣಕಣ ಮಂಗಲವು.
                                                        ..... ನಮ್ಮೀ ತಾಯ್ನೆಲವು.

ಕಾಶ್ಮೀರದಲಿ ಸುರಿವುದು ತುಹಿನ
ರಾಜಸ್ಥಾನದಿ ಸುಡುವುದು ಪುಲಿನ
ಮಲೆಯಾಚಲದಲಿ ಗಂಧದ ಪವನ
ವಿಧ ವಿಧ ಹೂ ಫಲವು

                                                        ..... ನಮ್ಮೀ ತಾಯ್ನೆಲವು.

ಹಲವು ಭಾಷೆ ನುಡಿ ಲಿಪಿಗಳ ತೋಟ
ವಿಧ ವಿಧ ಪಂಥ ಮತಗಳ ರಸದೂಟ
ಕಾಣ್ವದು ಕಾಮನಬಿಲ್ಲಿನ ನೋಟ
ಬಗೆ ಬಗೆ ಸಂಕುಲವು.
                                                        ..... ನಮ್ಮೀ ತಾಯ್ನೆಲವು.

ಗಂಗೆ ತುಂಗೆಯರ ಅಮೃತ ಸ್ತನ್ಯ
ಕುಡಿಸುತ ಮಾಡಿದೆ ಜೀವನ ಧನ್ಯ
ಮುಡುಪಿದು ಬದುಕು ನಿನಗೆ ಅನನ್ಯ
ಕ್ಷಣ ಕ್ಷಣ ಬಲ ಛಲವು.
                                                        ..... ನಮ್ಮೀ ತಾಯ್ನೆಲವು.

                           
                                                                                          - ಕುವೆಂಪು.

2 comments:

  1. ನಮಸ್ತೆ, ಇದು ಕುವೆಂಪು ಅವರ ಕವಿತೆ ಅಲ್ಲ. ಇದನ್ನು ಬರೆದವರು ಶ್ರೀ ಚಂದ್ರಶೇಖರ ಭಂಡಾರಿ ಯವರು. ದಯವಿಟ್ಟು ಚೆಕ್ ಮಾಡಿ ಹಾಗೂ ತಪ್ಪು ಸರಿಪಡಿಸಿ.

    ReplyDelete
  2. ಶ್ರೀ ಚಂದ್ರಶೇಖರ ಭಂಡಾರಿ ಹಾಗೂ ಈ ಹಾಡಿನ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ. : http://googleweblight.com/?lite_url=http://samvada.org/2014/news/rss-pracharak-writer-chandrashekar-bhandari-to-receive-karnataka-state-govt-award-for-his-book/&ei=WDvjgG4F&lc=en-IN&s=1&m=59&ts=1434202851&sig=AG8Ucunw8djI5UM3_sW4r_ehZuvzzmmrSw

    ReplyDelete