ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Sunday, 12 August 2012

ನೇಗಿಲ ಯೋಗಿ / Negila Yogi

ನೇಗಿಲ ಹಿಡಿದ, ಹೊಲದೊಳು ಹಾಡುತ,
ಉಳುವ ಯೋಗಿಯ ನೋಡಲ್ಲಿ.
ಫಲವನು ಬಯಸದ ಸೇವೆಯೇ ಪೂಜೆಯು,
ಕರ್ಮವೇ ಇಹಪರ ಸಾಧನವು.
ಕಷ್ಟದೊಳನ್ನವ ದುಡಿವನೆ ತ್ಯಾಗಿ,
ಸೃಷ್ಟಿನಿಯಮದೊಳಗವನೇ ಭೋಗಿ.
                                               ಉಳುವ ಯೋಗಿಯ....

ಲೋಕದೊಳೇನೆ ನಡೆಯುತಲಿರಲಿ
ತನ್ನೀ ಕಾರ್ಯವ ಬಿಡನೆಂದೂ
ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,
ಹಾರಲಿ ಗದ್ದುಗೆ ಮುಕುಟಗಳು,
ಮುತ್ತಿಗೆ ಹಾಕಲಿ ಸೈನಿಕರೆಲ್ಲ,
ಬಿತ್ತುಳುವುದನವ ಬಿಡುವುದೇ ಇಲ್ಲ.
                                               ಉಳುವ ಯೋಗಿಯ....

ಯಾರೂ ಅರಿಯದ ನೇಗಿಲ ಯೋಗಿಯೇ
ಲೋಕಕೆ ಅನ್ನವನೀಯುವನು.
ಹೆಸರನು ಬಯಸದೆ ಅತಿಸುಖಕೆಳಸದೆ,
ದುಡಿವನು ಗೌರವಕಾಶಿಸದೆ.
ನೇಗಿಲ ಕುಲದೊಳಗಡಗಿದೆ ಕರ್ಮ,
ನೇಗಿಲ ಮೇಲೆಯೇ ನಿಂತಿದೆ ಧರ್ಮ.
                                               ಉಳುವ ಯೋಗಿಯ....

                                                                                         - ಕುವೆಂಪು

23 comments:

  1. Hi, I suppose the first two lines of the song goes like this.

    "ನೇಗಿಲ ಹಿಡಿದ ಹೊಲದೊಳು ಹಾಡುತ
    ಉಳುವಾ ಯೋಗಿಯ ನೋಡಲ್ಲಿ"

    I hope you are aware of this link. You will like this-

    https://sites.google.com/site/kavanasangraha2/home

    ReplyDelete
    Replies
    1. Oh Thanks, I've amended that one now. And about that link, I was not aware of that. Thank you for that link. I surely like that a lot - vasu

      Delete
  2. ನೇಗಿಲ ಹಿಡಿದ, ಹೊಲದೊಳು ಹಾಡುತ,
    ಉಳುವ ಯೋಗಿಯ ನೋಡಲ್ಲಿ.
    ಫಲವನು ಬಯಸದ ಸೇವೆಯೇ ಪೂಜೆಯು,
    ಕರ್ಮವೇ ಇಹಪರ ಸಾಧನವು.
    ಕಷ್ಟದೊಳನ್ನವ ದುಡಿವನೆ ತ್ಯಾಗಿ,
    ಸೃಷ್ಟಿನಿಯಮದೊಳಗವನೇ ಭೋಗಿ.
    ಉಳುವಾ ಯೋಗಿಯ ನೋಡಲ್ಲಿ

    ಲೋಕದೊಳೇನೆ ನಡೆಯುತಲಿರಲಿ
    ತನ್ನೀ ಕಾರ್ಯವ ಬಿಡನೆಂದೂ
    ರಾಜ್ಯಗಳುದಿಸಲಿ, ರಾಜ್ಯಗಳಳಿಯಲಿ,
    ಹಾರಲಿ ಗದ್ದುಗೆ ಮುಕುಟಗಳು,
    ಮುತ್ತಿಗೆ ಹಾಕಲಿ ಸೈನಿಕರೆಲ್ಲ,
    ಬಿತ್ತುಳುವುದನವ ಬಿಡುವುದೇ ಇಲ್ಲ.
    ಉಳುವಾ ಯೋಗಿಯ ನೋಡಲ್ಲಿ
    ಬಾಳಿತು ನಮ್ಮೀ ನಾಗರಿಕತೆ ಸಿರಿ ಮಣ್ಣೋಣಿ ನೇಗಿಲಿನಾಶ್ರಯದಿ ನೇಗಿಲ ಹಿಡಿದ ಕೈಯಾದಾರದಿ ದೊರೆಗಳು ದರ್ಪದೊಳಾಳಿದರು ನೇಗಿಲ ಬಲದೊಳು ವೀರರು ಮೆರೆದರು ಶಿಲ್ಪಿಗಳೆಸೆದರು, ಕವಿಗಳು ಬರೆದರು
    ಉಳುವಾ ಯೋಗಿಯ ನೋಡಲ್ಲಿ


    ಯಾರೂ ಅರಿಯದ ನೇಗಿಲ ಯೋಗಿಯೇ
    ಲೋಕಕೆ ಅನ್ನವನೀಯುವನು.
    ಹೆಸರನು ಬಯಸದೆ ಅತಿಸುಖಕೆಳಸದೆ,
    ದುಡಿವನು ಗೌರವಕಾಶಿಸದೆ.
    ನೇಗಿಲ ಕುಲದೊಳಗಡಗಿದೆ ಕರ್ಮ,
    ನೇಗಿಲ ಮೇಲೆಯೇ ನಿಂತಿದೆ ಧರ್ಮ.
    ಉಳುವಾ ಯೋಗಿಯ ನೋಡಲ್ಲಿ
    - ----ಕುವೆಂಪು

    ReplyDelete
    Replies
    1. ಧನ್ಯವಾದಗಳು ಸರ್ ಪೂರ್ಣ ಗೀತೆಯನ್ನು ತಿಳಿಸಿದ್ದಕ್ಕಾಗಿ🙏

      Delete
  3. I like to listen this song & love to sing this song, A very energetic & enthusiastic song, awesome....

    ReplyDelete
  4. ಗೂಡ್ ನಿಸ್ ಪೊಎಂ

    ReplyDelete
  5. Nanu krushikanu santhoshavaitu

    ReplyDelete
  6. ತುಂಬಾ ಸೊಗಸಾಗಿದೆ

    ReplyDelete
  7. This song will bi dedicated for back bone of India ( farmer)..love it

    ReplyDelete
  8. ನಾಡಿನ ಬೆನ್ನೆಲುಬು, ಮಣ್ಣಿನ ಮಗನಿಗೊಂದು ನಮನ

    ReplyDelete
  9. ನಾಡಿನ ಬೆನ್ನೆಲುಬು, ಮಣ್ಣಿನ ಮಗನಿಗೊಂದು ನಮನ

    ReplyDelete
  10. I love this and it is very useful for a copitition

    ReplyDelete
  11. ನೇಗಿಲ ಕುಲದೊಳಗಡಗಿದೆ ಕರ್ಮ,
    ನೇಗಿಲ ಮೇಲೆಯೇ ನಿಂತಿದೆ ಧರ್ಮ.

    ReplyDelete
  12. ಅದು ನೇಗಿಲ ಕುಲ ಅಲ್ಲಾ.. ನೇಗಿನ ಕುಳ.. ಕುಳ ಎಂದರೆ ನೇಗಿಲಿನ ಚೂಪು ತುದಿ ಅಂತಾ.. ನೋಡಿ: https://kn.wiktionary.org/wiki/ploughshare

    ReplyDelete