ಆಕಾಶ ಬಿಕ್ಕುತಿದೆ....
ಮುಗಿಲ ಮುಸುಕ ಮರೆಗೆ,
ಮಾತಿರದ ತಾರೆಗಳು,
ಅಡಗಿ ಕುಳಿತ ಗಳಿಗೆ…
ಸೂರ್ಯ ಚಂದ್ರರಿರದೆ
ಸುರಿದ ಕಪ್ಪು ಸುತ್ತ ಚೆಲ್ಲಿ,
ಹಸಿರ ಉಸಿರು ಅಡಗಿ ಹೋಗಿ,
ಹೊಳೆವ ದಾರಿಯಲ್ಲಿ…
ಕುದಿವ ಕಡಲು ಹೊರಳುತ್ತಿದೆ
ಒಡಲ ಆಳದುರಿಗೆ.
ಬದಿಯ ಒಂಟಿ ದೀಪದಿಂದ
ಮಬ್ಬು ಸುರಿವುದಿಳೆಗೆ…
ಮಸುಕು ಮಸುಕು ಆಕೃತಿಗಳು
ಚಲಿಸಿದಂತಿದೆ,
ಕವಿದ ತೆರೆಯ ಆಚೆಯಿಂದ
ಏನೋ ಹೊಳೆದಿದೆ…
* ಸಾಹಿತ್ಯ ಯಾರದೆಂದು ತಿಳಿದಿಲ್ಲ, ಆದರೆ ಅಶ್ವಥ್ ರ ಸಿರಿಕಂಠದಲ್ಲಿ ಮೂಡಿಬಂದಿರುವ ಅದ್ಭುತವಾದ ಗೀತೆ.
Download this song
ಮುಗಿಲ ಮುಸುಕ ಮರೆಗೆ,
ಮಾತಿರದ ತಾರೆಗಳು,
ಅಡಗಿ ಕುಳಿತ ಗಳಿಗೆ…
ಸೂರ್ಯ ಚಂದ್ರರಿರದೆ
ಸುರಿದ ಕಪ್ಪು ಸುತ್ತ ಚೆಲ್ಲಿ,
ಹಸಿರ ಉಸಿರು ಅಡಗಿ ಹೋಗಿ,
ಹೊಳೆವ ದಾರಿಯಲ್ಲಿ…
ಕುದಿವ ಕಡಲು ಹೊರಳುತ್ತಿದೆ
ಒಡಲ ಆಳದುರಿಗೆ.
ಬದಿಯ ಒಂಟಿ ದೀಪದಿಂದ
ಮಬ್ಬು ಸುರಿವುದಿಳೆಗೆ…
ಮಸುಕು ಮಸುಕು ಆಕೃತಿಗಳು
ಚಲಿಸಿದಂತಿದೆ,
ಕವಿದ ತೆರೆಯ ಆಚೆಯಿಂದ
ಏನೋ ಹೊಳೆದಿದೆ…
* ಸಾಹಿತ್ಯ ಯಾರದೆಂದು ತಿಳಿದಿಲ್ಲ, ಆದರೆ ಅಶ್ವಥ್ ರ ಸಿರಿಕಂಠದಲ್ಲಿ ಮೂಡಿಬಂದಿರುವ ಅದ್ಭುತವಾದ ಗೀತೆ.
Download this song
No comments:
Post a Comment