ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday, 24 September 2012

ಹೇಳ್ಕೊಳ್ಳಕ್ ಒಂದ್ ಊರು / Helkollak ondooru

ಹೇಳ್ಕೊಳ್ಳಕ್ ಒಂದ್ ಊರು,
ತಲೆ ಮ್ಯಾಗೆ ಒಂದ್ ಸೂರು,
ಮಲ್ಗಾಕೆ ಭೂಮ್ ತಾಯಿ ಮಂಚ
ಕೈ ಹಿಡ್ದೊಳ್ ಪುಟ್ನಂಜಿ,
ನಗನಗ್ತಾ ಉಪ್ಪ್ ಗಂಜಿ,
ಕೊಟ್ರಾಯಿತು ರತ್ನನ್ ಪರ್ಪಂಚ

ಏನೋ ಖುಸಿಯಾದಾಗ
ಮತ್ ಹೆಚ್ಚಿ ಹೋದಾಗ
ಹಂಗೇನೆ ಪ್ರಪಂಚದಂಚ
ದಾಟ್ಕಂಡಿ ಹಾರಾಡ್ತಾ
ಕನ್ನಡದಲ್ ಪದವಾಡ್ತಾ
ಹಿಗ್ಗೋದು ರತ್ನನ್ ಪರ್ಪಂಚ

ಹಗಲೆಲ್ಲ ಬೆವರ್ ಹರಿಸಿ
ತಂದಿದ್ದ್ರಲ್ಲಿ ಒಸಿ ಮುರಿಸಿ
ಸಂಜೆಲಿ ಹುಳಿ ಹೆಂಡ ಕೊಂಚ
ಹೀರ್ತ ಮೈ ಝುಂ ಅಂದ್ರೆ
ವಾಸನೆ ಘಂ ಘಂ ಅಂದ್ರೆ
ತುಂಬ್ ಹೋಯ್ತು ರತ್ನನ್ ಪರ್ಪಂಚ

ದುಕ್ ಇಲ್ಲ ದಾಲ್ ಇಲ್ಲ
ನಮಗದ್ರಾಗ್ ಪಾಲಿಲ್ಲ
ನಾವ್ ಕಂಡಿದ್ದ್ ನಾಲ್ಕ್ಅಂಚವಂಚ
ನಮ್ಮಷ್ಟಕ್ ನಾವಾಗಿ ಇದ್ದಿದ್ದ್ರಲ್ ಹಾಯಾಗಿ
ಬಾಳೋದು ರತ್ನನ್ ಪರ್ಪಂಚ

ಬಡತನ ಗಿಡತನ ಏನಿದ್ರೇನು
ನಡತೇನ ಚೆನ್ನಾಗಿಟ್ಕೋಳೋದೆ ಅಚ್ಛಾ
ಅಂದ್ಕೊಂಡಿ ಸುಖವಾಗಿ
ಕಷ್ಟಕ್ಕೆ ನಗುಮುಖವಾಗಿ
ನಡೆಯೋದೇ ರತ್ನನ್ ಪರ್ಪಂಚ

ದೇವ್ರೇನ್ರ  ಕೊಡಲಣ್ಣ, ಕೊಡ್ದಿದ್ದ್ರೆ ಬುಡಲಣ್ಣ
ನಾವೆಲ್ಲ ಅವನೀಗೆ ಬಚ್ಚಾ
ಅವನ್ಹಾಕಿದ್ ತಾಳ್ದಂಗೆ, ಕಣ್ ಮುಚ್ಕೊಂಡ್ ಹೇಳ್ದಂಗೆ
ಕುಣೀಯಾದೆ ರತ್ನನ್ ಪರ್ಪಂಚ

                                                                            - ಜಿ. ಪಿ. ರಾಜರತ್ನಂ 

11 comments:

  1. ನನಗೆ ಈ ಹಾಡು ಬಹಳ ಇಸ್ಟ

    ReplyDelete
  2. ಕವಿತೆಗಳನ್ನು ಅಂತರ್ಜಾಲದಲ್ಲಿ ಬರೆದಿರುವುದಕ್ಕೆ ತುಂಬಾ ಧನ್ಯವಾದಗಳು

    ReplyDelete
  3. Amazing lyrics and music composition

    ReplyDelete
  4. Thank you so much for uploading...nice song

    ReplyDelete
  5. Thank you so much for uploading...nice song

    ReplyDelete
  6. Meaning full song. I like it very much

    ReplyDelete
  7. great rajarathnam sir... What a amazing meaningfull lyric really really i loved it

    ReplyDelete
  8. ಇಡಿ ಜೀವನದ ಸಾರವೇ ಇದರಲ್ಲಿ ಅಡಗಿದೆ .ಇದನ್ನೂ ಬರೆದ ಕವಿ ರಾಜರತ್ನವರು ಪದಪುಂಜದ ಬ್ರಹ್ಮ ಅಂತ ಕರೆಯಲು ಇಷ್ಟಪಡುತ್ತೆನೆ

    ReplyDelete