ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 1 September 2012

ಹಕ್ಕಿಯ ಹಾಡಿಗೆ ತಲೆದೂಗುವ ಹೂ.. / hakkiya haadige taledooguva hoo

ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.
ಹಸುವಿನ ಕೊರಳಿನ ಗೆಜ್ಜೆಯ ದನಿಯು ನಾನಾಗುವ ಆಸೆ.

ಹಬ್ಬಿದ ಕಾಮನ ಬಿಲ್ಲಿನ ಮೇಲಿನ ಮುಗಿಲಾಗುವ ಆಸೆ.
ಚಿನ್ನದ ಬಣ್ಣದ ಜಿಂಕೆಯ ಕಣ್ಣಿನ ಮಿಂಚಾಗುವ ಆಸೆ.

ತೋಟದ ಕಂಪಿನ ಉಸಿರಲಿ ತೇಲುವ ಜೇನಾಗುವ ಆಸೆ.
ಕಡಲಿನ ನೀಲಿಯ ನೀರಲಿ ಬಳುಕುವ ಮೀನಾಗುವ ಆಸೆ.

ಸಿಡಿಲನು ಕಾರುವ ಬಿರುಮಳೆಗಂಜದೆ ಮುನ್ನಡೆಯುವ ಆಸೆ.
ನಾಳೆಯ ಬದುಕಿನ ಇರುಳಿನ ತಿರುವಿಗೆ ದೀಪವನಿಡುವಾಸೆ.

ಮಣ್ಣಿನ ಕೊಡುಗೆಗೆ ನೋವಿಗೆ ನಲಿವಿಗೆ ಕನ್ನಡಿ ಹಿಡಿವಾಸೆ.
ಮಾನವ ಹೃದಯದ ಕರುಣೆಗೆ ಒಲವಿಗೆ ದನಿಗೂಡಿಸುವಾಸೆ.

                                                                                    - ಕೆ. ಎಸ್. ನರಸಿಂಹ ಸ್ವಾಮಿ 

Download this song

17 comments:

  1. Love this poem. Have you heard this sung in a very melodious tune probably by M. D. Pallavi, not sure(not the tune from the movie mysore mallige - a different one. Have been looking for a recording of that tune but unable to obtain it anywhere.

    ReplyDelete
  2. One should listen to the song sung by Mysore Ananthaswamy....

    ReplyDelete
  3. ಹಕ್ಕಿಯ ಹಾಡಿಗೆ ತಲೆದೂಗುವ ಹೂ ನಾನಾಗುವ ಆಸೆ.

    ReplyDelete
  4. ಕವಿತೆಗಳನ್ನು ಅಂತರ್ಜಾಲದಲ್ಲಿ ಬರೆದಿರುವುದಕ್ಕೆ ತುಂಬಾ ಧನ್ಯವಾದಗಳು

    ReplyDelete
  5. This comment has been removed by the author.

    ReplyDelete
  6. This comment has been removed by the author.

    ReplyDelete
  7. ಆಹ್ಲಾದ ಹಾಗೂ ಪುಳಕ ಮೇಳವಿಸಿದ ಕಾವ್ಯ

    ReplyDelete
  8. This song is by the poet laureate K.S. Narasimha Swamy

    ReplyDelete
  9. ಕವಿತೆಗಳನ್ನು ಅಂತರ್ಜಾಲದಲ್ಲಿ ಬರೆದಿರುವುದಕ್ಕೆ ತುಂಬಾ ಧನ್ಯವಾದಗಳು

    ReplyDelete
  10. ಕವಿತೆಗಳನ್ನು ಅಂತರ್ಜಾಲದಲ್ಲಿ ಬರೆದಿರುವುದಕ್ಕೆ ತುಂಬಾ ಧನ್ಯವಾದಗಳು

    ReplyDelete
  11. Shresta geethe, sada kelalu manasu haathoryuthade.

    ReplyDelete
  12. 'ಮೈಸೂರು ಮಲ್ಲಿಗೆ' ಕಾವ್ಯಸಂಕಲನ ಮೊದಲ ಬಾರಿ ಪ್ರಕಟಗೊಂಡು ನಾಳೆಗೆ 75 ವರ್ಷ. ಆದರೂ ಕೂಡ ಅಷ್ಟೇ ತಾಜಾತನವನ್ನು ಇನ್ನೂ ಉಳಿಸಿಕೊಂಡು. ಶ್ರೇಷ್ಠವಾದ ಕೃತಿ.

    ReplyDelete
  13. ಈ ಪದ್ಯ ಕನ್ನಡದ ಯಾವ ತರಗತಿಯಲ್ಲಿ ಇತ್ತು ಎಂಬುದನ್ನು ತಿಳಿಸಕೊಡಿ ದಯಮಾಡಿ
    ಸಾದ್ಯವಾದರೆ photocopy ಕಳುಹಿಸಿಕೊಡಿ
    Mail I'd: ktputtu@gmail.com

    ReplyDelete
  14. ನಾವು ಪ್ರಾಥಮಿಕ ಶಿಕ್ಷಣವನ್ನು ಪಡೆಯುತ್ತಿದ್ದ ಸಮಯದಲ್ಲಿ ಈ ಪದ್ಯ ಆರನೇ ತರಗತಿಯ ಕನ್ನಡ ಪಠ್ಯ ಪುಸ್ತಕದಲ್ಲಿ ಪ್ರಕಟಗೊಂಡಿತ್ತು ಆದರೆ ಈವಾಗ ಇದೆಯೋ ಇಲ್ಲವೋ ಗೊತ್ತಿಲ್ಲ.ಕೆ ಸ್ ನರಸಿಂಹ ಸ್ವಾಮಿಯವರ ಹಲವು ಸಾಹಿತ್ಯಗಳಲ್ಲಿ ಇದು ಒಂದು ಉತ್ತಮವಾದ ಸಾಹಿತ್ಯವಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಇದನ್ನು ಹಂಚಿಕೊಡಿರುದಕ್ಕೆ ಅನಂತ ಅನಂತ ಧನ್ಯವಾದಗಳು .

    ReplyDelete
  15. What a great poem?.Such an amazing drawing of his feeling?

    ReplyDelete