ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Thursday, 25 August 2011

ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು / Tappi Hoyitalle Chukki belakina jadu

ತಪ್ಪಿ ಹೋಯಿತಲ್ಲೇ ಚುಕ್ಕಿ ಬೆಳಕಿನ ಜಾಡು 
ಇನ್ನಿಲ್ಲವಾಯಿತೆ ಆ ಹಕ್ಕಿ ಹಾಡು,
ಹಸಿರೆಲೆ ಹೂವಿನ ನಡುವೆ ಹುಲ್ಲು ಹಾಸಿಗೆ 
ಮುರಿದು ಹೋಯಿತೇ ಈಗ ಆ ಪುಟ್ಟ ಗೂಡು ||

ಹನಿ ಹನಿಯಾಗಿ ತೊನೆದು ತೂಗಿದ ಪ್ರೀತಿ 
ಹರಿದು ಚೂರಾಯಿತೆ ಎದೆಯ ಒಲವಿನ ಬೀಡು 
ರೆಕ್ಕೆ ಬಡಿದೊತ್ತಿ ಎತ್ತಿಕೊಳ್ಳುವ ಹಕ್ಕಿ 
ಹಾಡಿನ ಜಾಡು ಹಿಡಿಯುತ್ತ ನನ್ನ ಪಾಡು ||

ಎಲ್ಲಿ ಹೋಯಿತು ವಲಸೆ ಗೂಡು ತೊರೆದಾ ಹಕ್ಕಿ 
ಸೇರಿ ಹೋಯಿತೆ ನೀಲಿ ಮುಗಿಲ ಮರೆಯ ನಾಡು 
ಹಾಡ ನೆನಪಿಗೆ ಹಿಂಡಿ ತೆವಳುತಿದೆ ಜೀವ 
ಮುಂದೆ ಬಯಲು ಹಿಂದೆ ಬಿದ್ದಿತ್ತು ಕಾಡು ಮೇಡು ||

9 comments:

  1. wow nimma prayatna nanage nijakku parama harsha tandide......... siguto ilvo antane hudukidaga nimma e jaala sikku thumba santhoshavagide...... thumba dhanyavadagalu sir

    ReplyDelete
    Replies
    1. ನಿಮ್ಮ ಹರ್ಷ ಕಂಡು ನನಗೂ ಸಂತಸವಾಗಿದೆ. ನನ್ನ ಈ ಪ್ರಯತ್ನಕ್ಕೆ ಇಂತಹ ಪ್ರೋತ್ಸಾಹದ ನುಡಿಗಳೇ ಇಂಬು ಕೊಡುವುದು. ಕೊನೆಯಲ್ಲಿ ಸರ್ ಬದಲು ಮೇಡಮ್ ಅಂದಿದ್ದರೆ ಇನ್ನಷ್ಟು ಖುಷಿಯಾಗುತ್ತಿತ್ತು - ವಸು.

      Delete
  2. This comment has been removed by the author.

    ReplyDelete
  3. thanks vasu, took a little help from u :-)
    check my blog http://abhijnaa.wordpress.com/
    your views n suggestions ree...

    ReplyDelete
    Replies
    1. Very good kiran, idu tumba olle prayatna.. sahityada jotege MP3 download.. tumba chennagide nimma blog, adrallu neevu bari bhavageete allade sharifa sahebara padagalu post madtirodu tumba khushi kodtu.. please continue this effort... really useful.. And haage.. ega nanage nimminda ondu help bekittu ree... kambaarara sahitya, nanna blog alli aa hadu baredidene naanu, but MP3 ene prayatna madidru sikkilla, can you post that on your blog.. haadu "avannoda", check for lyrics - http://kannadabhavageetegalu.blogspot.in/2011/12/blog-post_28.html and online audio - http://musicindiaonline.co/album/171-Kannada_Bhaava_Geethe/27223-Bandihanu_Enniniya/#/album/171-Kannada_Bhaava_Geethe/27223-Bandihanu_Enniniya/

      loved your blog. - ವಸು

      Delete
    2. many thanks for your encouraging words vasu, vl try to get that song :-)

      Delete
  4. ಇದರ ಸಾಹಿತಿ ದೇಶ್ ಕುಲಕರ್ಣಿ ...

    ReplyDelete
  5. Thanks so much Vasu for posting wonderful kannada light music songs with English translation. Commendable job :-)

    ReplyDelete