ರಚನೆ : ಡಾ. ಎನ್. ಎಸ್. ಲಕ್ಷ್ಮಿ ನಾರಾಯಣ ಭಟ್ಟ
ಕೃಷ್ಣ ..... ಕೃಷ್ಣ .... ಕೃಷ್ಣ .... ಕೃಷ್ಣ ..........
ಕೃಷ್ಣಾ .......
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ...
ಕಮಲವಿಲ್ಲದ ಕೆರೆ ನನ್ನ ಬಾಳು
ಚಂದ್ರ ಇಲ್ಲದಾ ರಾತ್ರಿ ಬೀಳು (೨)
ನೀ ಸಿಗದೇ ಉರಿ ಉರಿ ಕಳೆದೆ ಇರುಳ... (೨)
ಮಾತೆಲ್ಲ ಬಿಗಿದಿದೆ ದುಃಖ ಕೊರಳ.....
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ಅನ್ನ ಸೇರದು ನಿದ್ದೆ ಬಂದುದೆಂದು
ಕುದಿವೆ ಒಂದೇ ಸಮ ಕೃಷ್ಣ ಎಂದು... (೨)
ಯಾರು ಅರಿವರು ಹೇಳು ನನ್ನ ನೋವ ...(೨)
ತಲ್ಲಣಿಸಿ ಕೂಗುತಿದೆ ದಾಸಿ ಜೀವ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ.. (೨)
ಒಳಗಿರುವ ಗಿರಿಧರನೇ ಹೊರಗೆ ಬಾರೋ
ಕಣ್ಣೆದುರು ನಿಂತು ಆ ರೂಪ ತೋರೋ (೨)
ಜನುಮ ಜನುಮದಾ ರಾಗ ನನ್ನ ಪ್ರೀತಿ .. ಕೃಷ್ಣ .. ಕೃಷ್ಣ ... ಕೃಷ್ಣಾ ...
ಕೃಷ್ಣ ...
ಜನುಮ ಜನುಮದಾ ರಾಗ ನನ್ನ ಪ್ರೀತಿ
ನಿನ್ನೊಳಗೆ ಹರಿವುದೇ ಅದರಾ ರೀತಿ
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ ... (೨)
ನಾ ತಾಳಲಾರೆ ಈ ವಿರಹ ಕೃಷ್ಣ .. (೨)
ನೀ ಸಿಗದೇ ಬಾಳೊಂದು ಬಾಳೇ ಕೃಷ್ಣ... ಕೃಷ್ಣ .. ಕೃಷ್ಣ .. ಕೃಷ್ಣಾ ..
Thanks a lot Vasu. You have done a wonderful job. I was searching for bhavageethe lyrics and I got that in your site. Probably you could do this because you talk less with people, I think.
ReplyDeleteವಸು ಅವರೇ, ನಿಮ್ಮ ಈ ಬ್ಲಾಗ್ ತುಂಬಾ ಮೆಚ್ಚುಗೆಯಾಯಿತು.ನಿಮ್ಮ ಕೆಲಸಕ್ಕೆ ಹಾಟ್ಸ್ ಆಫ್ !
ReplyDeleteಥ್ಯಾಂಕ್ಸ್ !
ಅದು ಕುಣಿವೆ, ಕುದಿವೆ ಅಲ್ಲ
ReplyDeleteAm I correct
ReplyDeleteNo ಅದು ಕುಣಿವೆ
Deleteವಸು if u love nature that is the beauty hiding in u. So such person doesn't need another person to talk. Nature only our best frnd ! Thnk u for your gud work, really appreciative.
DeleteA
ReplyDeleteMy favorite beautiful song
ReplyDeleteThanks a lot
ReplyDeleteThis comment has been removed by the author.
ReplyDeleteWonderful
ReplyDelete