ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Sunday, 26 June 2011

ಯಾವ ಜನ್ಮದ ಮೈತ್ರಿ / Yaava janmada maitri

ರಚನೆ - ಕುವೆಂಪು
 
ಯಾವ ಜನ್ಮದ ಮೈತ್ರಿ ಈ ಜನ್ಮದಲಿ ಬಂದು 
ನಮ್ಮಿಬ್ಬರನು ಮತ್ತೆ ಬಂಧಿಸಿಹುದೋ ಕಾಣೆ !
ಎಲ್ಲಿದ್ದರೇನಂತೆ ನಿನ್ನನೊಲಿಯದೆ ಮಾಣೆ, 

ಗುರುದೇವನಾಣೆ, ಓ ನನ್ನ ನೆಚ್ಚಿನ ಬಂಧು!  
ವಿಶ್ವ ಜೀವನವೊಂದು ಪಾರವಿಲ್ಲದ ಸಿಂಧು!
ಮೇಲೆ ತೆರೆನೊರೆಯೆದ್ದು ಭೋರ್ಗರೆಯುತಿರೆ ರೇಗಿ,
ಅದರಂತರಾಳದಲಿ ಗುಪ್ತಗಾಮಿನಿಯಾಗಿ;

ಹೃದಯಗಳು ನಲಿಯುತಿವೆ ಪ್ರೇಮ ತೀರ್ಥದಿ ಮಿಂದು!
ಅದರರ್ಥಗಿರ್ಥಗಳು ಸೃಷ್ಟಿಕರ್ತನಿಗಿರಲಿ;
ವ್ಯರ್ಥ ಜಿಜ್ಞಾಸೆಯಲಿ ಕಾಲಹರಣವದೇಕೆ?
ಕುರುಡನಾದಗೆ ದಾರಿಯರ್ಥ ತಿಳಿಯಲೆ ಬೇಕೆ?

ಹಾದಿ ಸಾಗಿದರಾಯ್ತು ಬರುವುದೆಲ್ಲಾ ಬರಲಿ!  
ಬಾರಯ್ಯ, ಮಮಬಂಧು, ಜೀವನಪಥದೊಳಾವು
ಒಂದಾಗಿ ಮುಂದುವರಿಯುವ; ಹಿಂದಿರಲಿ ಸಾವು

7 comments:

 1. ಎಲ್ಲಿದ್ದರೆನಂತೆ->ಎಲ್ಲಿದ್ದರೇನಂತೆ
  ಗುರುದೆವನಾಣೆ->ಗುರುದೇವನಾಣೆ

  (ತಿದ್ದಿದಮೇಲೆ ಈ ಕಮೆಂಟನ್ನು ತೆಗೆದುಬಿಡಿ)

  ReplyDelete
 2. ಕಮೆಂಟ್ ತೆಗೆಯುವ ಅಗತ್ಯವಿಲ್ಲ ವರುಣ್. ನಾನು ಇದನ್ನ ಇಲ್ಲಿವರೆಗೂ ಯಾಕೆ ಗಮನಿಸಿರಲಿಲ್ಲ ಅಂತ ಬೇಸರವಾಗುತ್ತಿದೆ ನನಗೆ. ತೋರಿಸಿಕೊಟ್ಟಿದ್ದಕ್ಕೆ Thank You. ಈ ಕಮೆಂಟನ್ನು ನಾನು ತೆಗೆಯುವುದಿಲ್ಲ, ಮತ್ತೆ ತಪ್ಪುಗಳು ಮರುಕಳಿಸದಂತೆ ಎಚ್ಚರವಾಗಿರಲು ಇವೆ ನನಗೆ ಸಹಕಾರಿ. Thanks again - ವಸು

  ReplyDelete
  Replies
  1. ಕುವೆಂಪು ಅವರ ಈ ಕವನ ಅಮೋಘ

   Delete
  2. ಕುವೆಂಪು ಅವರ ಈ ಕವನ ಅಮೋಘ

   Delete
 3. ಸಾಹಿತ್ಯ : ಕುವೆಂಪು
  ಗಾಯನ : ಬಿ.ಆರ್.ಛಾಯ

  ಸೊಬಗಿನಾ ಸೆರೆಮನೆಯಾಗಿಹೆ ನೀನು
  ಚೆಲುವೇ.....ಸರಸತಿಯೇ....
  ಅದರಲಿ ಸಿಲುಕಿದಾ ಸೆರೆಯಾಳಾನು
  ನನ್ನೆದೆಯಾರತಿಯೇ......

  ನಿನ್ನೆಳೆ ಮೊಗದಲಿ ನಸುನಗೆಯಾಗಿರೆ ನನಗಿಹುದೊಂದಾಸೆ.....
  ನಿನ್ನಾ ಮುಡಿಯಲಿ ಹೂವಾಗಿರುವುದು ನನಗಿನ್ನೊಂದಾಸೆ......

  ತಾವರೆ ಬಣ್ಣದ ನಿನ್ನಾ ಹಣೆಯಲಿ ಕುಂಕುಮವಾಗಿರಲೆನಗಾಸೆ
  ಬಳ್ಳಿಯಲೇಳಿಪ ನಿನ್ನಾ ಕೈಯ್ಯಲಿ ಹೊಂಬಳೆಯಾಗಿರಲೆನಗಾಸೆ
  ಪದ್ಮವ ಮುಸುಕಿದ ರೇಸಿಮೆಯಂತಿಹ ಸೀರೆಯ ನಿರಿಯಾಗಿರುವಾಸೆ
  ಮನವನು ಸೆಳೆಯುವ ನಿನ್ನಯ ನಡುವಿಗೆ ಕಟಿಬಂಧನವಾಗಿರುವಾಸೆ....{ಪಲ್ಲವಿ}

  ನಿನ್ನಾ ಕೈಯ್ಯಲಿ ಗಾನವ ಸೂಸುವ ವೀಣೆಯು ನಾನಾಗುವುದಾಸೆ
  ನಿನ್ನೊಳು ನಾನು ನನ್ನೊಳು ನೀನು ಪ್ರೇಮದಿ ಲಯವಾಗುವುದಾಸೆ
  ಚೆಲುವೆ...ಸರಳೆ...ಮುದ್ದಿನ ಹೆಣ್ಣೆ ನಿನ್ನವನಾನಾಗಿರುವಾಸೆ
  ಇನ್ನೇನುಸುರಲಿ ಕಾಮನ ಕನ್ನೇ ನನಗಿನ್ನೇನೇನೋ ಆಸೆ.............{ಪಲ್ಲವಿ}

  http://www.youtube.com/watch?v=Riy-W46QKNw

  ReplyDelete
 4. Adbhuthavaada kaavya, prapanchadalli ella bhandavyakku artha sambhandagalu kattalaguvudilla. Jeevanadalli odagi baruva anubhandagalannu anubhavisudu mukhyave horathu adara parAmarshe mukhya valla

  ReplyDelete