ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Saturday, 3 December 2011

ಸಂಜೆಯ ರಾಗಕೆ ಬಾನು ಕೆಂಪೇರಿದೆ / sanjeya ragake banu kempagide

ಸಂಜೆಯ ರಾಗಕೆ ಬಾನು ಕೆಂಪೇರಿದೆ
ತಿಂಗಳು ಮೂಡಿ ಬೆಳಕಿನ ಕೋಡಿ ಚೆಲ್ಲಾಡಿದೆ,
ಈಗ ರಂಗೇರಿದೆ ||

ಮರಗಿಡ ನೆಲದ ಮೇಲೆ ನೆರಳನು ಹಾಸಿದೆ
ಹೂಗಳ ದಳಗಳ ನಡುವೆ ನಿನ್ನದೇ ಬೆರಳಿದೆ ||

ಗಾಳಿಯ ಜೊತೆಯ ಗಂಧವು ನಿನ್ನನ್ನು ಸವರಿದೆ
ಒಳಗೂ ಹೊರಗೂ ವ್ಯಾಪಿಸಿ ಯೌವ್ವನ ಕೆರಳಿದೆ ||

ಕೊಳದಲಿ ಮೂಡಿದ ಬಿಂಬವು ಹೂಗಳ ಮರೆಸಿದೆ
ದಳದಲಿ ಎಂತಹ ಕನಸಿನ ಲೋಕವು ತೆರೆದಿದೆ ||

--------------------------------------------------------------------------------------------------------

sanjeya raagake baanu kemperide

sanjeya raagake baanu kemperide
tingalu moodi belakina kodi chelladide
eega rangeride ||

maragida nelada mele neralanu haaside
hoogala dalagala naduve ninade beralide ||

gaaliya joteya gandhavu ninnannu savaride
olagu horagu vyaapisi yavvana keralide ||

koladali moodida bimbavu hoogala mareside
daladali entaha kanasina lokavu teredide ||

1 comment:

 1. ವಸುರವರಿಗೆ,
  ನಿಮ್ಮ ಸಾಹಿತ್ಯ ಪ್ರೇಮ ನಿರಂತರವಾಗಿ ಹೀಗೇ ಸಾಗಲಿ.
  ಸಾಹಿತ್ಯದಷ್ಟೇ ಹಿತವಾಗಿ,ಹೃದಯಸ್ಪರ್ಶಿಯಾಗಿ ನಿಮ್ಮ ಬದುಕು ಮೂಡಲಿ.
  ಅದ್ಭುತವಾದ ಕವಿತೆಗಳನ್ನ ನೆನಪುಮಾಡಿಕೊಟ್ಟಿದ್ದೀರಿ.
  ತಮಗೆ ಆತ್ಮೀಯ ಧನ್ಯವಾದಗಳು...

  ReplyDelete