ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Tuesday, 3 January 2012

ಈ ವಿರಹ ಕಡಲಾಗಿದೆ / Ee viraha kadalaagide

ಈ ವಿರಹ ಕಡಲಾಗಿದೆ.. ನೀನಿರದೆ
ಇನಿದಾದ ಸನಿಹ ಸಿಗದೆ
ಸವಿ ನೆನಪೆ ಸಿಹಿಯಾಗಿದೆ
ಎಂದೆಂದು ಹಸಿರಾದ ಹೊನಲಾಗಿ ಹರಿದಿದೆ ||

ಹೂಡಿದ ಹಸಿ ಕನಸು ಬಾಡದ ಸುಮವಾಗಿ
ಬದುಕಲ್ಲಿ ನಗೆ ಅರಳಿ ಆಸೆಯ ಬಗೆ ಕೆರಳಿ
ಈ ನೊಂದ ಜೀವಕ್ಕೆ ಮಳೆಬಿಲ್ಲು ನೀನಾದೆ
ರಂಗಾದ ಸೆಲೆಯಾದೆ ತಂಪಾದ ನೆಲೆಯಾದೆ
                                     ಸವಿ ನೆನಪೇ...

ಪ್ರೀತಿಯ ಸಿರಿ ವೀಣೆ ಮೀಟಿದೆ ಈ ಹೃದಯ
ಕುಂತಲ್ಲಿ ನಿಂತಲ್ಲಿ ನೆನೆದಿದೆ ನಿನ್ನ ದೆಸೆಯ
ಬಯಕೆಯ ಕಾಜಾಣ ನಿನಗಾಗಿ ಕೂಗಿದೆ
ಮೂಡಿದ ಅನುರಾಗ ಸುಖ ಕೋರಿ ಬೇಡಿದೆ
                                     ಸವಿ ನೆನಪೇ...

                                                   - ಪ್ರೊ. ದೊಡ್ಡರಂಗೇಗೌಡ

Download This Song

2 comments:

  1. ಈ ಕವಿತೆಯ ರಚನೆ ಯಾರದ್ದು?

    ReplyDelete
  2. ನನಗೆ ಈ ಬಗ್ಗೆ ಮಾಹಿತಿ ಇದುವರೆಗೂ ಇರಲಿಲ್ಲ, ಸಾಹಿತ್ಯವನ್ನು ಗೆಳತಿ ಒದಗಿಸಿದ್ದಳಷ್ಟೇ.ಇದು ಪ್ರೊ. ದೊಡ್ಡರಂಗೇಗೌಡರ ಕವಿತೆ. - ವಸು

    ReplyDelete