ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday 12 November 2014

ಯಾಕೆ ಕಾಡುತಿದೆ ಸುಮ್ಮನೆ ನನ್ನನು / Yake Kadutide Summane Nannanu

ಯಾಕೆ ಕಾಡುತಿದೆ ಸುಮ್ಮನೆ ನನ್ನನು
ಯಾವುದು ಈ ರಾಗ
ಒಂದೇ ಸಮನೆ ಹಾಯುತಲಿದೆ ಅರಿವಿಗೆ
ಗುರುತೇ ತಪ್ಪಿದಾಗ

ಯಾವುದೋ ವಸಂತ ರಾತ್ರಿಯಲಿ
ಹೊಳೆದ ತಾರೆ ನೆನಪಾಗುತಿದೆ
ಮಸುಕು ನೆನಪುಗಳ ಮಳೆಯಲ್ಲಿ
ಮನಸು ಒಂದೇ ಸಮ ತೋಯುತಿದೆ

ಕರುಳ ಕೊರೆವ ಚಳಿ ಇರುಳಿನಲಿ
ಪ್ರಾಣಕೆ ಮೊಳೆಯುವ ನೋವಿನಲಿ
ಅರಸಿ ಅಲೆವೆ ನಾ ಸುರಿಸುತ ಕಂಬನಿ
ಕಳೆದ ರಾಗಗಳ ಕೊರಗಿನಲಿ

                                        - ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

7 comments:

  1. "ವಸು" ಅವರೇ, ಭಾವಗೀತೆಗಳ ಸಂಗ್ರಹ ಒಂದೇ ಕಡೆ ಸಿಗುವಂತೆ ಮಾಡುತ್ತಿದ್ದೀರಿ. ಅಭಿನಂದನೆಗಳು. ನಿಮ್ಮ ಎರಡೂ ಬ್ಲಾಗ್ ನೋಡಿದ್ದೇನೆ. ಚೆನ್ನಾಗಿವೆ.
    ಯಾರಿಗಾಗಿ ಎಂಬ ಪ್ರಶ್ನೆಯೇ ಇಲ್ಲದೆ ಬರೆಯುತ್ತಿರಿ. ಬರೆಯಿರಿ, ಬರೆಯುತ್ತಲೇ ಇರಿ.
    (ಇಂದು ನಾ ಹಾಡಿದರೂ ಅಂದಿನಂತೆಯೇ ಕುಳಿತು ಕೇಳುವಿರಿ ಸಾಕೆನಗೆ ಅದುವೆ ಬಹುಮಾನ... ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ)

    ReplyDelete
  2. ಮೇಡಂ, ನಿಮ್ಮದು fb ಅಕೌಂಟ್ ಇದೆಯಾ?

    ReplyDelete
  3. ಕನ್ನಡ ಭಾವಗೀತೆಗಳ ಪುಟ್ಟ ಪ್ರಪಂಚ ಇದು.. ನಂಗೆ ಗೊತ್ತಿಲ್ಲದ ಎಷ್ಟೋ ಗೀತೆಗಳನ್ನು Post ಮಾಡಿದ್ದಿರಿ. ಅನಂತ ಧನ್ಯವಾದಗಳು:)

    ReplyDelete
  4. Thanks lot for beautiful poems u r sharing through u r website,hate offf

    ReplyDelete
  5. ಧನ್ಯವಾದಗಳು, ಈ ಹಾಡನ್ನು ತುಂಬ ದಿನದಿಂದ ಹುಡುಕುತ್ತಿದ್ದೆ. ನಿಮ್ಮ ಪೋಸ್ಟ್ ಬಹಳ ಸಹಾಯ ಮಾಡಿತು.

    ReplyDelete