ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday 2 July 2011

ಮೊದಲ ದಿನ ಮೌನ / Modala Dina Mouna

ಮೊದಲ ದಿನ ಮೌನ ಅಳುವೇ ತುಟಿಗೆ ಬಂದಂತೆ 
ಚಿಂತೆ ಬಿಡಿ ಹೂವ ಮುಡಿದಂತೆ 
ಹತ್ತುಕಡೆ ಕಣ್ಣು ಸಣ್ಣಗೆ ದೀಪ ಉರಿದಂತೆ 
ಜೀವದಲಿ ಜಾತ್ರೆ ಮುಗಿದಂತೆ || ಮೊದಲ ದಿನ ಮೌನ ||

ಎರಡನೆಯ ಹಗಲು ಇಳಿಮುಖವಿಲ್ಲ ಇಷ್ಟು ನಗು 
ಮೂಗುತಿಯ ಮಿಂಚು ಒಳಹೊರಗೆ 
ನೀರೊಳಗೆ ವೀಣೆ ಮಿಡಿದಂತೆ ಆಡಿದ ಮಾತು 
ಬೇಲಿಯಲಿ ಹಾವು ಹರಿದಂತೆ || ಮೊದಲ ದಿನ ಮೌನ ||

ಮೂರನೆಯ ಸಂಜೆ ಹೆರಳಿನ ತುಂಬಾ ದಂಡೆ ಹೂ 
ಹೂವಿಗೂ ಜೀವ ಬಂತಂತೆ 
ಸಂಜೆಯಲಿ ರಾತ್ರಿ ಇಳಿದಂತೆ ಬಿರು ಬಾನಿಗೂ
ಹುಣ್ಣಿಮೆಯ ಹಾಲು ಹರಿದಂತೆ || ಮೊದಲ ದಿನ ಮೌನ ||

                                                                                     - ಕೆ. ಎಸ್. ನರಸಿಂಹ ಸ್ವಾಮಿ 

7 comments:

  1. This comment has been removed by the author.

    ReplyDelete
  2. Thanks for posting.

    Beautiful lyrics. I guess, kannadada kampu Bere yaava bhaasheyallu Illa.

    ReplyDelete
  3. Meaningful and beautiful lyrics. Thanks for posting

    ReplyDelete
  4. ಹಾಡಿನ ಎರಡನೇ ಸಾಲಿನಲ್ಲಿ ಬರುವ "ಹತ್ತುಕಡೆ ಕಣ್ಣು" ಪದವನ್ನು ನಾನು "ಅತ್ತು ಕಡೆಗಣ್ಣು" ಎಂದು ಓದಿದ ನೆನಪು. ಜೊತೆಗೆ ಇದು ಮುಂದಿನ ಪದಗಳಿಗೆ ತಾಳೆಯೂ ಆಗುತ್ತದೆಯಲ್ಲವೇ... ಇದು ನನ್ನ ಅಭಿಪ್ರಾಯ ಮಾತ್ರ, ತಪ್ಪು ಕಂಡುಹಿಡಿಯುವ ಪ್ರಯತ್ನವಲ್ಲ.

    ReplyDelete
    Replies
    1. ಎಲ್ಲಾರ ಕಣ್ಣು ಹೊಸದಾಗಿ ಬಂದ ಹೆಣ್ಣಿನ ಮೇಲೆ. ಅದನ್ನು ಹತ್ತು ಕಡೆ ಕಣ್ಣು ಅಂತ ಹೇಳಿದ್ದಾರೆ. ಸಣ್ಣಗೆ ದೀಪ ಉರಿದಂತೆ ಎಂದರೆ ದೀಪವನ್ನು ನೇರ ನೋಡಲಿಕ್ಕಾಗುವುದಿಲ್ಲ ಹಾಗೆ ಎಲ್ಲರೂ ಈಕೆಯನ್ನು ನೋಡುತ್ತಿರುತ್ತಾರೆ ಆದರೆ ಇವಳು ಎಲ್ಲರನ್ನು ನೋಡಲಿಕ್ಕಾಗುವುದಿಲ್ಲ
      ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ.

      Delete