ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Saturday, 12 May 2012

ಎಲೆಗಳು ನೂರಾರು... / Elegalu nooraaru

ಎಲೆಗಳು ನೂರಾರು ಭಾವದ ಎಳೆಗಳು ನೂರಾರು 
ಎಲೆಗಳ ಬಣ್ಣ ಒಂದೇ ಹಸಿರು
ಜಾತಿ, ಭಾಷೆ, ಪಂಥ ಹಲವು 
ಅವುಗಳ ಹಿಂದೆ ಮಾತ್ರ ಒಂದೇ ಒಲವು 
ಸಾಗೋಣ ಒಟ್ಟಿಗೆ ಸಾಗೋಣ
ನಾವು ನೀವು ಸೇರಿ ಒಂದಾಗಿ 
ನೀಗೋಣ ಭಿನ್ನತೆ ನೀಗೋಣ 
ಸಾವಿರ ಹೆಜ್ಜೆ ಒಂದೇ ಗುರಿಗಾಗಿ ||

ಕಿಡಿಗಳು ನೂರಾರು ಬೆಳಕಿನ ಕುಡಿಗಳು ನೂರಾರು 
ಬೆಳಕಿನ ಪರಿಗೆ ಒಂದೇ ಹೆಸರು 
ಸೂರ್ಯ, ಚಂದ್ರ, ಲಾಂದ್ರ, ಹಣತೆ,
ಅವುಗಳ ಹಿಂದೆ ಮಾತ್ರ ಒಂದೇ ಘನತೆ 
ತೆರೆಯೋಣ ಹೃದಯ ತೆರೆಯೋಣ 
ನಾವು ನೀವು ಸೇರಿ ಒಂದಾಗಿ 
ಮರೆಯೋಣ ಭೇದ ಮರೆಯೋಣ 
ನದಿಗಳು ಕೂಡಿದ ಪ್ರೀತಿಯ ಕಡಲಾಗಿ ||

ಪದಗಳು ನೂರಾರು ಬದುಕಿನ ಹದಗಳು ನೂರಾರು 
ಪದಗಳ ಹಿಂದೆ ಒಂದೇ ಉಸಿರು 
ಅಕ್ಕರೆಯಿಂದ ಒಟ್ಟಿಗೆ ಬಾಳೋಣ 
ಭಾರತ ಮಾತೆಗೆ ನಮ್ಮ ಪ್ರೀತಿಯ ತೋರೋಣ 
ಕಟ್ಟೋಣ ನಾಡನು ಕಟ್ಟೋಣ 
ನಾವು ನೀವು ಸೇರಿ ಒಂದಾಗಿ 
ಮುಟ್ಟೋಣ ಬಾನನು* ಮುಟ್ಟೋಣ
ತಾರೆಗಳೇ ಈ ನಾಡಿನ ಸೂರಾಗಿ ||

                                                            - ಹೆಚ್. ಎಸ್. ವೆಂಕಟೇಶ ಮೂರ್ತಿ

* ಒಂದು ಕಡೆ ಈ ಸಾಲು "ಮಾಡನು ಮುಟ್ಟೋಣ" ಎಂಬಂತಿದೆ, ರತ್ನಮಾಲ ಪ್ರಕಾಶ್ ತಂಡ  ಹಾಡಿರುವ ಹಾಡಿನಲ್ಲಿ ಬಾನನು ಮುಟ್ಟೋಣ ಎಂದಿದೆ. ಸರಿಯಾದ ಪದ ತಿಳಿದವರು ಹೇಳಿದರೆ ಸೇರಿಸುವೆ.

Thanks to Abhijnaa for requesting this wonderful song.

10 comments:

 1. ವಸು, thanks for responding so quickly
  wonderful song
  ಮೊದಲನೇ ಸಾಲಿನಲ್ಲಿ ಭಾವದ ಎಳೆಗಳು (ಎಲೆಗಳು ಬದಲಿಗೆ) ಇರಬೇಕೇನೋ ಅನ್ಸುತ್ತೆ
  correct me if wrong
  check out the audio
  http://abhijnaa.wordpress.com/2012/05/13/%E0%B2%8E%E0%B2%B2%E0%B3%86%E0%B2%97%E0%B2%B3%E0%B3%81-%E0%B2%A8%E0%B3%82%E0%B2%B0%E0%B2%BE%E0%B2%B0%E0%B3%81-elegalu-nooraru/

  ReplyDelete
  Replies
  1. Yes, you are right. ಅದನ್ನು ಈಗ ತಿದ್ದಿದ್ದೇನೆ. ಬಹುಶಃ ಕೊನೆಯ ಸಾಲು "ಬಾನನು ಮುಟ್ಟೋಣ", ಅನ್ನುವುದೇ ಸರಿಯೇನೋ, ಆದರೆ ನಾನು ಕೇಳಿದಂತೆ, ಈ ಕೊಂಡಿಯಲ್ಲಿ ಮಾಡನು ಮುಟ್ಟೋಣ ಎಂದಿದೆ, ನಿಮಗೆ ಖಾತ್ರಿ ಯಾವುದೋ ತಿಳಿಸಿ - http://www.youtube.com/watch?v=UrpziYbmJ6c

   Delete
 2. ವಸು, ಈ ಹಾಡ್ನ ಇಂದೇ ಮೊದಲ ಬಾರಿ ಕೇಳಿದ್ದು, just no words ಕಣ್ರೀ,
  ಮತ್ತೆ ಮತ್ತೆ ತಲೆ ತಿನ್ತಿರೋದಕ್ಕೆ ಕ್ಷಮೆ ಇರ್ಲಿ, ಬರೆದು ಬಿಡ್ರಿ ಸಾಹಿತ್ಯಾನ, ಈ ಸೋಮಾರಿಗೆ ಸ್ವಲ್ಪ ಕಷ್ಟ
  ಹಾಗೆ ಹಾಡು ಹೇಗೆ ಅನ್ನಿಸ್ತು ಅಂತ ಹೇಳ್ರಿ
  http://f.cl.ly/items/1I1I0j1T3H15463l0K45/yaake%20heege%20beesuttirabeku%20gaali.mp3

  ReplyDelete
  Replies
  1. ಸರಿ, ಬರೆಯುವ, ಹಾಡಿನ ಬಗೆಗೆ ಮಾತೇ ಇಲ್ಲ ಬಿಡಿ, its speech less. ಆದರೆ ಹಾಡಿನ ಒಂದು ಸಾಲು ನನಗೆ ಗ್ರಹಿಸಲು ಆಗುತ್ತಿಲ್ಲ, ಪಲ್ಲವಿಯ ನಾಲ್ಕನೇ ಸಾಲು. "ಯಾಕೆ ನೆಲಕೆ ಮಳೆ ಹೂಡಲೇ ಬೇಕು ದಾಳಿ" ಸಾಲಿನ ನಂತರ ಇದೆಯಲ್ಲ ಅದು, ಅದನ್ನೊಂದು ನೀವು ಹೇಳಿದರೆ, ಪೋಸ್ಟ್ ರೆಡಿ. ಇಡೀ ಹಾಡು ಬರೆದುಕೊಂಡಿದ್ದೇನೆ. ಆ ಸಾಲು ಬೇಕಷ್ಟೇ.

   Delete
 3. ನಗುವ ಯಾಕೆ ಅವಜೀವಗಳೆಲ್ಲವ ಹೂಳಿ
  thanks vasu for the song...sorry for the trouble

  ReplyDelete
  Replies
  1. Sorry ಯಾಕ್ರೀ ಕೇಳ್ತೀರಾ, In fact ನಾನು ನಿಮಗೆ thanks ಹೇಳ್ಬೇಕು. ನಿಮ್ಮ ಬೇಡಿಕೆಯಿಂದ ಒಳ್ಳೊಳ್ಳೆ ಹಾಡುಗಳು ಸಿಗ್ತಿವೆ ನನ್ನ ಸಂಗ್ರಹಕ್ಕೆ . Thank you. ಹೀಗೆ ಕೇಳ್ತಿರಿ, ನನಗೂ MP3 ಸಿಗುತ್ತಲ್ವಾ, ಅದಕ್ಕಿಂತ ಬೇಕಾ - ವಸು

   Delete
 4. ಮಾಡು ಅಂದ್ರೆ ಬಾನು ಎಂಬ ಅರ್ಥವೂ ಇದೆ ಅಲ್ವಾ?

  ReplyDelete
  Replies
  1. ಇರಬಹುದು. ಆದರೆ ಅರ್ಥಗಳನ್ನು ಕಲ್ಪಿಸುತ್ತಾ ನಾವು ಅಲ್ಲಿ ಪದವನ್ನು ಸೇರಿಸುವುದು ಸರಿಯಲ್ಲ, ಅಲ್ವಾ? ನಾನು ಕೂಡಿಸುತ್ತಿರುವುದು ಮೂಲ ಕವನಗಳ ಸಾಹಿತ್ಯವನ್ನ. ಕವಿ ಯಾವ ಪದ ಬಳಸಿದ್ದಾರೋ, ಅದನ್ನೇ ಇಲ್ಲಿ ದಾಖಲಿಸಬೇಕೆಂದು ನನ್ನಾಸೆ. - ವಸು

   Delete
 5. Thanks for this AMAZING Song, sir. This is such a wonderful and patriotic song!
  - By:Avani

  ReplyDelete
 6. dayavittu elegalu nooraaru poem padyada sariyada summary helbahuda

  ReplyDelete