ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Thursday, 17 May 2012

ಕರುಣಾಳು ಬಾ ಬೆಳಕೆ .. / Karunaalu baa belake

ಕರುಣಾಳು ಬಾ ಬೆಳಕೆ ಮಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು
ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳನೊಡನೆಯೆ ಸಾಕು ನನಗೊಂದು ಹೆಜ್ಜೆ
ಮುನ್ನ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆಯೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

                                                      - ಬಿ.ಎಂ. ಶ್ರೀಕಂಠಯ್ಯ


The Original by John Henry Newman (1801-90), composed in 1833

Lead, kindly Light, amid the encircling gloom
Lead thou me on;
The night is dark, and I am far from home,
Lead thou me on.
Keep thou my feet; I do not ask to see
The distant scene; one step enough for me.
I was not for ever thus, nor prayed that thou
Shouldst lead me on;
I loved to choose and see my path; but now
Lead thou me on,
I loved the garish day, and, spite of fears,
Pride ruled my will: remember not past years.
So long thy power hath blessed me, sure it still
Will lead me on,
O'er moor and fen, o'er crag and torrent, till
The night is gone;
And with the morn those angel faces smile,
Which I have loved long since, and lost awhile.

27 comments:

 1. ಮೌನಿಗೆ ನಮಸ್ಕಾರ. ನಿಮ್ಮನ್ನ ವಸು ಅನ್ನುವುದಕ್ಕಿಂತ ಮೌನಿ ಅನ್ನುವುದೇ ಸರಿಕಾಣುತ್ತದೆ. ಭಾವಗೀತೆಗಳನ್ನ ಕಲೆಹಾಕಿ, ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಓದಿಗೂ, ಅಭಿರುಚಿಗೂ ತಾಳಮೇಳವಿಲ್ಲದೇ ಇದ್ದಾಗ, ಸ್ವಲ್ಪ ಕಾಲ ನಡೆಯುತ್ತದೆ ಅಷ್ಟೇ. ಆಮೇಲೆ ಬರಬರುತ್ತಾ, "ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವಾ?" ಎನ್ನುವ ಪರಿಸ್ಥಿತಿ ನಿರ್ಮಾಣವಾಗುತ್ತಾ ಹೋಗುತ್ತದೆ. ಓದನ್ನೂ, ಅಭಿರುಚಿಯನ್ನೂ ಆದಷ್ಟೂ ಹತ್ತಿರ ಇಟ್ಟುಕೊಳ್ಳಿ.
  "ಮುಸುಕಿದೀ ಮಬ್ಬಿನಲಿ" ಅಲ್ಲ, "ಮಸುಕಿದೀ ಮಬ್ಬಿನಲಿ". ಬಿ.ಎಂ. ಶ್ರೀಕಂಠಯ್ಯನವರ ಹೆಸರು ತಪ್ಪಾಗಿ ಕಾಣುತ್ತದೆ. ದಯವಿಟ್ಟು ಗಮನಿಸಿಕೊಳ್ಳಿ. ನಿಮಗೆ ಒಳ್ಳೆಯದಾಗಲಿ.
  ಶುಭ ಹಾರೈಕೆಗಳೊಂದಿಗೆ,
  ನಡೆದಾಡುವ ಭೂತಮ್ಮ

  ReplyDelete
  Replies
  1. ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದ. ಹೌದು, ಓದಿಗೂ ಅಭಿರುಚಿಗೂ ತಾಳಮೆಳವಿಲ್ಲದಾಗ ಎರಡನ್ನೂ ನಿಭಾಯಿಸುವುದು ಬಲು ಕಷ್ಟ. ಅದಕ್ಕಾಗೆ ಈಗ ನನ್ನ ಓದಿನ ಹಾದಿಯನ್ನು ಬಿಟ್ಟು ಅಭಿರುಚಿಯ ಬೆನ್ನು ಹತ್ತಿದ್ದೇನೆ. ಅದರಲ್ಲೇ ಓದು ಮುಂದುವರೆಸುವ ಪ್ರಯತ್ನದಲ್ಲಿದ್ದೇನೆ. ಖಂಡಿತಾ ಸ್ವಲ್ಪ ಕಾಲ ನಡೆಸಿ ಬಿಡುವಂತಹ ಹುಚ್ಚಲ್ಲ ನನ್ನದು. ನನಗೆ ಎಲ್ಲಿಯವರೆಗೂ ಗೀತೆಗಳು ಸಿಗುತ್ತಿರುತ್ತವೋ ಅಲ್ಲಿಯವರೆಗೂ ಬರೆಯುತ್ತಲೇ ಹೋಗುತ್ತೇನೆ. ಹಾಡಿನಲ್ಲಿ "ಮಸುಕಿದೀ ಮಬ್ಬಿನಲಿ" ಪದವನ್ನೇನೋ ತಿದ್ದಿದೆ. ಆದರೆ, ಬಿ.ಎಂ.ಶ್ರೀ ಅವರ ಹೆಸರು ಸರಿಯಾಗೇ ಇದೆಯಲ್ಲಾ, ಅದರಲ್ಲೇನು ತಪ್ಪಿದೆ ತಿಳಿಸಿದರೆ ಖಂಡಿತಾ ತಿದ್ದುವೆ. - ವಸು.

   Delete
  2. ಶ್ರೀಕಂಠಯ್ಯ ಅನ್ನುವ ಪದದಲ್ಲಿ, "ಯ" ಒತ್ತು, "ಠ" ಅಕ್ಷರಕ್ಕೂ, "ಯ" ಅಕ್ಷರಕ್ಕೂ ಮಧ್ಯ ಬಂದಿರುವಂತೆ ಕಾಣುತ್ತಿದೆ.

   Delete
  3. Ega tiddiddene, neevu bareda padavanne alli paste madiddene, ega sariyideya nodi heli. thank you. - vasu

   Delete
  4. :) ಈಗ ಸರಿಯಾಗಿದೆ.......:)

   -ನಡೆದಾಡುವ ಭೂತಮ್ಮ

   Delete
 2. ನಿಮ್ಮ ಬ್ಲಾಗ್ ಬಗ್ಗೆ ಪ್ರಜಾವಾಣಿಯಲ್ಲಿ ಬಂದ ಲೇಖನ, "ಭಾವಗೀತೆಗಳ ನೆಡುತೋಪು"
  http://prajavani.net/include/story.php?news=8365&section=56&menuid=13

  -ನಡೆದಾಡುವ ಭೂತಮ್ಮ

  ReplyDelete
  Replies
  1. ಈ ಒಂದು ಕೊಂಡಿಗಾಗಿ ಒಂದು ವಾರದಿಂದ ಬಹಳ ಹುಡುಕುತ್ತಿದ್ದೆ. ತುಂಬಾ ಧನ್ಯವಾದಗಳು - ವಸು

   Delete
 3. ವಸು, ಸಿಕ್ಕಾಪಟ್ಟೆ ಖುಷಿ ಆಯಿತು ರೀ, ಹಾರ್ದಿಕ ಅಭಿನಂದನೆಗಳು

  ReplyDelete
 4. Have shared it on my facebook wall :-)

  ReplyDelete
  Replies
  1. Thank you for the wishes. Can I get the facebook links. I mean, what's your user name in facebook - vasu

   Delete
  2. https://www.facebook.com/coffeewithkiran

   Delete
 5. The Original by John Henry Newman (1801-90), composed in 1833

  Lead, kindly Light, amid the encircling gloom
  Lead thou me on;
  The night is dark, and I am far from home,
  Lead thou me on.
  Keep thou my feet; I do not ask to see
  The distant scene; one step enough for me.
  I was not for ever thus, nor prayed that thou
  Shouldst lead me on;
  I loved to choose and see my path; but now
  Lead thou me on,
  I loved the garish day, and, spite of fears,
  Pride ruled my will: remember not past years.
  So long thy power hath blessed me, sure it still
  Will lead me on,
  O'er moor and fen, o'er crag and torrent, till
  The night is gone;
  And with the morn those angel faces smile,
  Which I have loved long since, and lost awhile.

  ReplyDelete
  Replies
  1. Thank You Narayan, for the original Lyrics. - Vasu

   Delete
 6. Replies
  1. Me too. Not a day passes without me listening to this in the morning.

   Delete
 7. Musukida (musukiruva anta artha)+ee-musukidee correct. Masukidee Alla.

  ReplyDelete
 8. Musukidee mabbu allave? Masukida padada arthavenu? Masuku is not "encircling"

  ReplyDelete
 9. This comment has been removed by the author.

  ReplyDelete
 10. Musuku andhre 'shroud' antha, matthe masuku andhre 'hazy' antha artha barthade.

  Illi masuku sari idhe..

  ReplyDelete
 11. Musuku or masaku, both by and large mean things covered or not shown as they are. Let us take both words and cherish the meaning of the poem. When ever I feel depressed, gloomy, I look for this song which will embrace me like my mother and sooth me.

  ReplyDelete
 12. ಎಷ್ಟು ಚೆನ್ನಾಗಿ ತೊಡಗಿಕೊಂಡಿದ್ದೀರಿ. ಕೊನೆಯಾಗುವ ಬದುಕಲ್ಲಿ ಛಂದದ ಹೆಜ್ಜೆಯಿಡುವವರ ಜೊತೆ ಕೆಲ ಕಾಲವಾದರೂ ನಮ್ಮ ಪ್ರಯಾಣವಿರಬೇಕು.
  ಮರಿಗೌಡ ಮುದ್ದನಗೌಡ್ರ 9008962684

  ReplyDelete