ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Thursday, 23 August 2012

ಉರಿವ ಬಿಸಿಲಿರಲಿ, ಕೊರೆವ ಚಳಿ ಇರಲಿ / Uriva bisilirali


ಉರಿವ ಬಿಸಿಲಿರಲಿ, ಕೊರೆವ ಚಳಿ ಇರಲಿ,
ನಮ್ಮ ಮನದೊಳಿರಲಿ ನಿನ್ನ ಧ್ಯಾನ.
ಶರಣರ ನೆಲವೇ, ತರುಣರ ಛಲವೇ,
ನಿನ್ನ ಚರಣತಲಕೆ ನಮ್ಮ ಪ್ರಾಣ.

ಊನವಾಗಿ ನಿನ್ನ ಮಾನ
ನಾವು ಜೀವಿಸಿದ್ದು ಫಲವೇನಾ ?
ದೇವರ ನೆಲವೇ ಕಾಯ್ವರ ಫಲವೇ
ನಿನ್ನ ನೇರವಿರಿಸೆ ನಮ್ಮ ಪ್ರಾಣ.

ಹೊಟ್ಟೆ ಹೊರೆಯಲು ರಟ್ಟೆ ಬೀಸುವ
ನಾವು ಹಿಟ್ಟಿನಾಳ್ಗಳಲ್ಲ
ಹುಟ್ಟಿನಿಂದ ನಿನ್ನ ಹೊರೆವ ಹೊಣೆ ಹೊತ್ತ
ದಿಟ್ಟರಾರು ಶಿವ ಬಲ್ಲ.
ನಿನ್ನ ಮುಟ್ಟಿ ಬಹಕೆ ಬದುಕಿಲ್ಲ.

ಧೀರರ ನಾಡೆ ವೀರರ ಬೀಡೆ
ನಿನ್ನ ಸೇವೆಗೈಯದವ ಹೊಲ್ಲ

                                            - ಪು.ತಿ.ನ. 

Download this song

4 comments:

 1. ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ಯಾಕ್ರೀ ಇಲ್ಲ? ನೀವೀಗ ಕದ್ದು ತಂದಿಲ್ಲಿ publish ಮಾಡಿದೀರಲ್ಲ. ಅದು ಯಾವ ತಾಣದಿಂದ ಬಂತೋ? ನಿಮ್ಮ ಸ್ವಯಂ ಪ್ರಯತ್ನ ಅಂತೂ ಅಲ್ಲ

  ReplyDelete
  Replies
  1. ಸ್ವಾಮೀ, ನೀವು ಯಾರೋ ನನಗೆ ತಿಳಿದಿಲ್ಲ, ಆದರೆ ಕದ್ದು ತಂದಿರುವುದು ಎಂಬ ಮಾತು ವಾಪಸು ತೆಗೆದುಕೊಳ್ಳಿ. ನಾನು ಈ ಬ್ಲಾಗ್ ಶುರು ಮಾಡಿದ್ದು ಸರಿ ಸುಮಾರು ಒಂದೂವರೆ ವರ್ಷದ ಕೆಳಗೆ. ಆಗ ನನಗೆ ಎಷ್ಟು ಹುಡುಕಿದರೂ ಅಂತರ್ಜಾಲದಲ್ಲಿ ಖಂಡಿತಾ ಖಚಿತವಾದ ಸಾಹಿತ್ಯ ಸಿಕ್ಕಿರಲಿಲ್ಲ. ಆಗ ನಾನಿದನ್ನು ಸಂಗ್ರಹಿಸಲು ಶುರು ಮಾಡಿದೆ. ಪ್ರತಿಯೊಂದು ಹಾಡನ್ನೂ ಕೇಳಿ ನಾನೇ ಟೈಪ್ ಮಾಡಿಕೊಂಡು ಬ್ಲಾಗ್ ನಲ್ಲಿ ಬರೆದ ನಂತರ ಮತ್ತೊಮ್ಮೆ ಕೇಳಿ ನಂತರವೇ ಪಬ್ಲಿಷ್ ಮಾಡಿರುವುದು. ನಿಮಗೆ ಬೇರೆ ಕಡೆ ಸಾಹಿತ್ಯ ಸಿಗುತ್ತಿದ್ದರೆ ಖಂಡಿತಾ ಅಲ್ಲಿ ನೋಡಿ, ಸಾಧ್ಯವಿದ್ದರೆ ನನಗೂ ಆ ಜಾಲತಾಣಗಳ ವಿಳಾಸ ಕೊಡಿ. ನಾನು ನನ್ನ ಸಂತೋಷಕ್ಕೋಸ್ಕರ ಮಾಡಿಕೊಳ್ಳುತ್ತಿರುವ ಸಂಗ್ರಹವಿದು. ಕವಿಗಳ ಕವಿತೆಗಳನ್ನು ಜೋಡಿಸುವುದು ಕೃತಿ ಚೌರ್ಯ ಎನ್ನುವುದಾದರೆ, ಹೌದು, ಇದು ಚೌರ್ಯವೇ, ಇಲ್ಲಿರುವ ಕವಿತೆಗಳೆಲ್ಲ ಬೇರೆಯವರವು. ಆದರೆ ಬೇರೆ ಜಾಲ ತಾಣದಿಂದ ಕಾಪಿ ಮಾಡಿರುವುದಂತೂ ಅಲ್ಲ. ನಾನೇನು ಮಾಡುತ್ತಿದ್ದೇನೆ ಎನ್ನುವುದರ ಬಗೆಗೆ ನನಗೆ ಸ್ಪಷ್ಟತೆಯಿದೆ. ನನ್ನ ಸ್ವಂತ ಪ್ರಯತ್ನ ಎಷ್ಟಿದೆ ಎನ್ನುವುದೂ ಸಹ ನನಗೆ ಗೊತ್ತು. ಅದು ಕಳ್ಳತನ ಎಂದು ನಿಮಗೆ ಅನ್ನಿಸಿದರೆ ಅದು ನಿಮ್ಮ ಅಭಿಪ್ರಾಯ. ನಿಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಕ್ಕಾಗಿ ಧನ್ಯವಾದಗಳು. ನನ್ನ ಸಂಗ್ರಹವಂತೂ ಹೀಗೇ ಮುಂದುವರೆಯುತ್ತದೆ. - ವಸು

   Delete
 2. ತುಂಬಾ ಒಳ್ಳೇ ಕೆಲಸ ಧನ್ಯವಾದಗಳು ನಿಮ್ಮ ಸಾಹಿತ್ಯಪ್ರೇಮಕ್ಕೆ ಶ್ರಮಕ್ಕೆ . ಮುಂದೆಸಾಗಲಿ ಶುಭವಾಗಲಿ

  ReplyDelete
 3. I searched this song for many times but I didn't get d song.. Thank u very much mam...

  ReplyDelete