ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Wednesday 31 October 2012

ಹಚ್ಚೇವು ಕನ್ನಡದ ದೀಪ / Hacchevu kannadada deepa

ಹಚ್ಚೇವು ಕನ್ನಡದ ದೀಪ
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವ ದೀಪ

ಬಹುದಿನಗಳಿಂದ ಮೈಮರೆವೆಯಿಂದ
ಕೂಡಿರುವ ಕೊಳೆಯ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು
ಅಲ್ಲಲ್ಲಿ ಕರಣ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ
ಕನ್ನಡದ ಕಳೆಯ ಕೆಚ್ಚೇವು
ಮರೆತೇವು ಮರವ ತೆರೆದೇವು ಮನವ
ಎರೆದೇವು ಒಲವ ಹಿರಿನೆನಪಾ
ನರನರವನೆಲ್ಲ ಹುರಿಗೊಳಿಸಿ ಹೊಸದು ಹಚ್ಚೇವು ಕನ್ನಡದ ದೀಪ.

ಕಲ್ಪನೆಯ ಕಣ್ಣು ಹರಿವನಕ ಸಾಲು
ದೀಪಗಳ ಬೆಳಕ ಬೀರೇವು
ಹಚ್ಚಿರುವ ದೀಪದಲಿ ತಾಯರೂಪ
ಅಚ್ಚಳಿಯದಂತೆ ತೋರೇವು
ಒಡಲೊಳಲ ಕೆಚ್ಚಿನ ಕಿಡಿಗಳನ್ನು
ಗಡಿನಾಡಿನಾಚೆ ತೂರೇವು
ಹೊಮ್ಮಿರಲು ಪ್ರೀತಿ ಎಲ್ಲಿನದು ಭೀತಿ
ನಾಡೊಲವೆ ನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ.

ನಮ್ಮವರು ಗಳಿಸಿದ ಹೆಸರುಳಿಸಲು
ಎಲ್ಲಾರು ಒಂದುಗೂಡೇವು
ನಮ್ಮೆದೆಯ ಮಿಡಿಯುವೀ ಮಾತಿನಲ್ಲಿ
ಮಾತೆಯನು ಪೂಜೆಮಾಡೇವು
ನಮ್ಮುಸಿರು ತೀಡುವೀ ನಾಡಿನಲ್ಲಿ
ಮಾಂಗಲ್ಯಗೀತ ಹಾಡೇವು
ತೊರೆದೇವು ಮರುಳ ಕಡೆದೇವು ಇರುಳ
ಪಡೆದೇವು ತಿರುಳ ಹಿರಿನೆನಪಾ
ಕರುಳೆಂಬ ಕುಡಿಗೆ ಮಿಂಚನ್ನೆ ಮುಡಿಸಿ ಹಚ್ಚೇವು ಕನ್ನಡದ ದೀಪ

                                                                                     - ಡಿ. ಎಸ್. ಕರ್ಕಿ

Download this song

                          

28 comments:

  1. 'ನರನರವನೆಲ್ಲ ಹುರಿಗೊಳಿಸಿ ಹೊಸದು' ಎಂಬಲ್ಲಿ 'ಹೊಸದು', 'ಹೊಸೆದು' ಆಗಬೇಕು

    ReplyDelete
    Replies
    1. U r right sir...Thanks for the correction

      Delete
    2. 'ಮಾಂಗಲ್ಯಗೀತ' ಎಂಬಲ್ಲಿ 'ಗೀತ​', ಗೀತೆ ಆಗಬೇಕು

      Delete
    3. ಕಲ್ಪನೆಯ ಕಣ್ಣು ಹರಿವನಕ ಸಾಲು
      what is the meaning of ಹರಿವನಕ and ಹಿಡಿನೆನಪಾ

      Delete
    4. ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು : ನಮ್ಮ ಕಲ್ಪನೆಯ ಶಕ್ತಿ ಎಲ್ಲಿಯವರೆಗೂ ನೋಡಬಹುದೋ , ಎಲ್ಲಿಯವರೆಗೆ ಆ ದೃಷ್ಟಿ ಹರಿಯುವುದೋ ಅಲ್ಲಿಯ ವರೆಗೆ ಸಲು ದೀಪಗಳನ್ನು ಹಚ್ಚಿ ಬೆಳಕನ್ನು ಬೀರುತ್ತೇವೆ

      Delete
  2. ಕನ್ನಡದ ಭಾವಗೀತೆೆಗಳು ಕನ್ನಡ ದ ಗಿರಿಶಿಖರವಿದ್ದಹಾಗೆ

    ReplyDelete
  3. ನಿಮ್ಮ ಪ್ರಯತ್ನ. ಹೀಗೆ ನಿರಂತರ ಸಾಗಲಿ ನಮ್ಮ ಪ್ರೋತ್ಸಾಹ ಖಂಡಿತವಾಗಿಯೂ ಇರುವುದು

    ReplyDelete
  4. Replies
    1. Translation???? Sorry I didn't get you... Any way thank you for the reply...

      Delete
    2. It is not a translation you moron. Obviously you are clueless. It is a bhavageethe, in kannada.
      Vasu good job. Please keep up the good work. You will always have my support.

      Delete
    3. You're a funny fellow.... U idiot it's not a translation...

      Dear Vasu, keep it up. You're always supported by us...

      Delete
    4. Sorry it's not translation it is bhavageete.
      ಜೈ ಕನ್ನಡಾಂಬೆ
      ಜೈ ಕರ್ನಾಟಕ ಮಾತೆ

      Delete
    5. You are right sir

      Delete
  5. Nanage idara bhavartha beku..aagutta

    ReplyDelete
  6. Bahala olleya kelasa. Bhavageethegalu ondu bhaashege anarghya rathnagalu idea haage.

    ReplyDelete
  7. ಹಿರಿನೆನಪಾ ಸರೀನಾ ಹಿಡಿನೆನಪಾ ಸರೀನಾ?

    ReplyDelete
  8. Artha madkondre e bhavageethe Alli estu bhavikhyathe mattu namma karunadina bagge samskruthi na geetheya moolaka sariddare, we are grateful for this song thanks for apploding this song 🙏

    ReplyDelete
  9. I was asking this only from that time

    ReplyDelete
  10. I was asking this only from that time

    ReplyDelete