ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Tuesday, 15 November 2016

ರಾತ್ರಿಯ ತಣ್ಣನೆ ತೋಳಿನಲಿ / Ratriya Tannane Tolinali

ರಾತ್ರಿಯ ತಣ್ಣನೆ ತೋಳಿನಲಿ, ಮಲಗಿರೆ ಲೋಕವೆ ಮೌನದಲಿ,
ಯಾರೋ ಬಂದು, ಹೊಸಿಲಲಿ ನಿಂದು, ಸಣ್ಣಗೆ ಕೊಳಲಿನ ದನಿಯಲ್ಲಿ
ಕರೆದರಂತಲ್ಲೆ ಹೆಸರನ್ನು.
ಕರೆದವರಾರೇ ನನ್ನನ್ನು?

ಬೇಗೆಗಳೆಲ್ಲಾ ಆರಿರಲು, ಪ್ರೀತಿಯ ರಾಗ ಹಾಡಿರಲು,
ಭೂಮಿಯ ತುಂಬಾ ಹುಣ್ಣಿಮೆ ಚಂದಿರ
ಬಣ್ಣದ ಮಾಯೆಯ ಹಾಸಿರಲು,
ಕರೆದರಂತಲ್ಲೆ ಹೆಸರನ್ನು. ಕರೆದವರಾರೇ ನನ್ನನ್ನು?

ಹಸಿರು ಮರಗಳ ಕಾಡಿನಲಿ, ಬಣ್ಣದ ಎಲೆಗಳ ಗೂಡಿನಲಿ,
ಮರಿಗಳ ಕೂಡಿ ಹಾಡುವ ಹಕ್ಕಿಯ
ಸಂತಸ ಚಿಮ್ಮಲು ಹಾಡಿನಲಿ.
ಕರೆದರಂತಲ್ಲೆ ಹೆಸರನ್ನು, ಕರೆದವರಾರೇ ನನ್ನನ್ನು?

ಹೇಗೆ ಇದ್ದರೆ? ಎಲ್ಲಿ ಹೋಗಲಿ? ಕಂಡರೆ ಹೇಳಿ ಗುರುತನ್ನು.
ನಿದ್ದೆಯ ಕರೆದು ಕಾಯುತ್ತಿರುವೆ,
ಎಂತಹ ಹೊತ್ತಿನಲು ಅವರನ್ನು.
ಕರೆದವರಾರೇ ನನ್ನನ್ನು? ಕರೆದರೆ ನಿಲ್ಲೇ ನಾನಿನ್ನು.

                                                   – ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

5 comments:

  1. Raatriya thannaneya anubhava ee kaavyadinda

    ReplyDelete
  2. neevu bahala olleya kelasa madtha iddira----Dhanyavada helidastu saladu

    ReplyDelete
  3. ರತ್ನಮಾಲಾ ಅವರು ಹಾಡಿರುವ ಗೀತೆಯ ಸಾಹಿತ್ಯ, ಮತ್ತು ಇಲ್ಲಿರುವ ಸಾಹಿತ್ಯದಲ್ಲಿ ಬಹಳಾ ವ್ಯತ್ಯಾಸವಿದೆ

    ReplyDelete
  4. ಕೊನೆಯ ಚರಣದಲ್ಲಿ - ನಿದ್ದೆಯ ತೊರೆದು ಕಾಯುತ್ತಿರುವೆ - ನಿದ್ದೆಯ ಕರೆದು ಅಂದರೇ, ತಪ್ಪಾಗುತ್ತದೆ

    ReplyDelete
  5. ಕೊನೆಯ ಚರಣದಲ್ಲಿ - ನಿದ್ದೆಯ ತೊರೆದು ಕಾಯುತ್ತಿರುವೆ - ಅಂತ ಇರಬೇಕು. ನಿದ್ದೆಯ ಕರೆದು ಅಂದರೆ, ತಪ್ಪಾಗುತ್ತದೆ

    ReplyDelete