ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday, 18 February 2017

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು/ Nee nan attig belakangidde nanju

ನೀ ನನ್ ಅಟ್ಟೀಗ್ ಬೆಳಕಂಗ್ ಇದ್ದೆ ನಂಜು
ಮಾಗೀಲ್ ಉಲ್ಮೇಲ್ ಮಲಗಿದ್ದಂಗೆ ಮಂಜು
ಮಾಗಿ ಕುಗ್ತು ಬೇಸ್ಗೆ ನುಗ್ತು
ಇದ್ಕಿದ್ದಂಗೆ ಮಾಯವಾಗೋಯ್ತು ಮಂಜು
ನಂಗೂ ನಿಂಗೂ ಯೆಂಗ್ ಅಗಲೋಯ್ತು ನಂಜು.

ಸೀರಂಗ್ಪಟ್ನ ತಾವ್ ಕಾವೇರಿ ಒಡದಿ
ಯೆಳ್ಡೊಳಾಗಿ ಪಟ್ನದ್ ಸುತ್ತ ನಡದಿ
ಸಂಗಂದಲ್ಲಿ ಸೇರ್ಕೊಂಡ್ ಮಳ್ಳಿ
ಮುಂದಕ್ ವೋದ್ದು ನಮಗೆ ಗ್ನಾನದ್ ಪಂಜು
ಈಗ ಆಗಲಿದ್ರೇನ್ ಮುಂದ್ ನಾವ್ ಸೇರ್ತಿವಿ ನಂಜು.

ಆಗಲೋಡೋಗ್ತೆ ರಾತ್ರಿ ಬಂತಂತ್ ಅಂಜಿ
ರಾತ್ರಿ ಮುಗದೋದ್ರ್ ಆಗಲೆ ಅಲ್ವ ನಂಜಿ
ರಾತ್ರಿ ಬಿತ್ತು ಆಗಲೇ ಬತ್ತು
ಓಗೋದ್ ಮಳ್ಳಿ ಬರೋದ್ಕಲ್ವ ನಂಜಿ
ಆ ನೆಮ್ಕೆ ನನ್ ಜೀವಾನ್ ಉಳಸೋ ಗಂಜಿ.

                                              - ಜಿ. ಪಿ. ರಾಜರತ್ನಂ

10 comments:

  1. Hi Madam... I need the lyrics of a song called "Soojigalla"

    ReplyDelete
  2. ಸಾಧುಕೋಕಿಲ ಧ್ವನಿಯಲ್ಲೂ ಈ ಗೀತೆ ಚೆನ್ನಾಗಿ ಮೂಡಿಬಂದಿದೆ.. ಭಾವಗೀತೆಯನ್ನು ಅದಕ್ಕೆ ಧಕ್ಕೆ ಬಾರದಂತೆ ಇನ್ನೂ ಹೆಚ್ಚು ಜನಸಾಮನ್ಯರಿಗೆ ಪರಿಚಯ ಮಾಡಿಕೊಟ್ಟ ಕೀರ್ತಿ ಅವರಿಗಿರಲಿ.
    ಹೀಗೆ ಎಲ್ಲ ಭಾವಗೀತೆಗಳ ಸಾಲ್ಗಳ ನೀವು ಪರಿಚಯಿಸಿ.

    ReplyDelete
    Replies
    1. ಹೌದು. ನಿಮ್ಮ ಕಾಮೆಂಟ್ ಓದಿದ ಮೇಲೆ ಕೇಳಿದೆ. ಎಂಥಾ ಸಿನಿಮಾದಲ್ಲಿ ಎಂಥಾ ಹಾಡು ಅನಿಸಿತು. ಇಂಥಾ ಹಾಡುಗಳನ್ನ ಜನರಿಗೆ ಮುಟ್ಟಿಸುವ ಪರಂಪರೆ ಮುಂದುವರಿಯಬೇಕು. ಸಾಧುಗೆ ಇನ್ನೊಮ್ಮೆ ನಮಸ್ಕಾರ ಮಾಡಿ ನಿಮಗೂ ಧನ್ಯವಾದ ಹೇಳಿ ಎರಡು ಮಾತು ಮುಗಿಸುತ್ತೇನೆ.

      Delete
  3. I don't have any words to tell for what you did, god bless you, but i think it should reach everyone, i am commenting in english bcz i don't have Kannada keypad. I really love "kannada Bhavagithegalu" i listen the songs sang byt M D Pahlavi. Thank you. 👍💙✌

    ReplyDelete
  4. A GREAT JOB.........KELAVU SALA HALEYA KAVITEGALA 1-2 LINES NENAPAAGUTTAVE POORA IDDIDDARE ENDU MANASSINALLI TUDITA BARUTTADE...

    ReplyDelete
  5. ಶುಭವಾಗಲಿ ತಮಗೆ...
    ಧನ್ಯವಾದಗಳು...

    ReplyDelete
  6. ನೀವು ಫೇಸ್'ಬುಕ್'ನಲ್ಲಿ ಇದ್ದೀರಾ?

    ReplyDelete
  7. This comment has been removed by the author.

    ReplyDelete