ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday 2 July 2011

ಹಿಂದ ನೋಡದ / Hinda Nodada

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!    

ಗಾಳಿ ಹೆಜ್ಜಿ  ಹಿಡದ ಸುಗಂಧ ಅತ್ತ ಅತ್ತ ಹೋಗುವಂದ (೨)
ಹೋತ ಮನಸು ಅವನ ಹಿಂದ ಹಿಂದ ನೋಡದ ಗೆಳತಿ ಹಿಂದ ನೋಡದ ||

ನಂದ ನನಗ ಎಚ್ಚರಿಲ್ಲ ಮಂದಿಗೊಡವಿ ಏನ ನನಗ (೨)
ಒಂದೇ ಅಳತಿ ನಡೆದದ ಚಿತ್ತ ಹಿಂದ ನೋಡದ ಗೆಳತಿ ಹಿಂದ ನೋಡದ ||

ಸೂಜಿ ಹಿಂದ ದಾರದ್ಹಾಂಗ ಕೊಳ್ಳದೊಳಗ ಜಾರಿದ್ಹಾಂಗ (೨)
ಹೋತ ಹಿಂದ ಬಾರದ್ಹಾಂಗ ಹಿಂದ ನೋಡದ ಗೆಳತಿ ಹಿಂದ ನೋಡದ ||

ಒಂದೇ ಬಾರಿ ನನ್ನ ನೋಡಿ ಮಂದ ನಗಿ ಹಾಂಗ ಬೀರಿ
ಮುಂದ ಮುಂದ ಮುಂದ ಹೋದ ಹಿಂದ ನೋಡದ ಗೆಳತಿ ಹಿಂದ ನೋಡದ!

                                                                          - ಅಂಬಿಕಾತನಯದತ್ತ  (ದ. ರಾ. ಬೇಂದ್ರೆ )

6 comments:

  1. ree vasu avre Benre masthara ondu geete ide 'vishvamatheya charana sanjatha paramanu anu nanu'(correct agi kotthilla)dayavittu adannu blogigilisi

    ReplyDelete
  2. This comment has been removed by the author.

    ReplyDelete
  3. This comment has been removed by the author.

    ReplyDelete
  4. ಧನ್ಯವಾದಗಳು ವಸು ರವರೆ, ಎಷ್ಟೋ ಕಲಾವಿದರಿಗೆ ನಿಮ್ಮ ಈ ಪ್ರಯತ್ನ ದಾರಿದೀಪ. ನಿಮ್ಮ ಕಾಯಕ ಹೀಗೇ ಮುಂದುವರೆಯಲಿ. ನಟರಾಜ್ ಗೋಗಟೆ, ಕೊಪ್ಪ.

    ReplyDelete
  5. ಧನ್ಯವಾದಗಳು ವಸು ರವರೆ, ಎಷ್ಟೋ ಕಲಾವಿದರಿಗೆ ನಿಮ್ಮ ಈ ಪ್ರಯತ್ನ ದಾರಿದೀಪ. ನಿಮ್ಮ ಕಾಯಕ ಹೀಗೇ ಮುಂದುವರೆಯಲಿ. ನಟರಾಜ್ ಗೋಗಟೆ, ಕೊಪ್ಪ.

    ReplyDelete