ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Saturday, 10 March 2012

ಯಾರಿಗೂ ಹೇಳೋಣು ಬ್ಯಾಡ... / Yarigu helonu byada

ಯಾರಿಗೂ ಹೇಳೋಣು ಬ್ಯಾಡ (೩)
ಹಾರಗುದರಿ ಬೆನ್ನ ಏರಿ
ಸ್ವಾರರಾಗಿ ಕೂತು ಹಾಂಗ
ದೂರ ದೂರ ಹೋಗೋಣಾಂತ ||೧||

ಯಾರಿಗೂ ಹೇಳೋಣು ಬ್ಯಾಡ
ಹಣ್ಣು ಹೂವು ತುಂಬಿದಂಥ
ನಿನ್ನ ತೋಟ ಸೇರಿ ಒಂದ
ತಿನ್ನೋಣಂತ ಅದರ ಹೆಸರ || ೨ ||


ಯಾರಿಗೂ ಹೇಳೋಣು ಬ್ಯಾಡ
ಕುಣಿಯೋಣಂತ ಕೂಡಿ ಕೂಡಿ
ಮಣಿಯೋಣಂತ ಜಿಗಿದು ಹಾರಿ
ದಣಿಯದಲೇ ಆಡೋಣಂತ || ೩ ||

ಯಾರಿಗೂ ಹೇಳೋಣು ಬ್ಯಾಡ
ಮಲ್ಲಿಗಿ ಮಂಟಪದಾಗ
ಗಲ್ಲ ಗಲ್ಲ ಹಚ್ಚಿ ಕೂತು
ಮೆಲ್ಲ ದನಿಲೆ ಹಾಡೋಣಂತ || ೪ ||


ಯಾರಿಗೂ ಹೇಳೋಣು ಬ್ಯಾಡ
ಹಾವಿನ ಮರಿಯಾಗಿ ಅಲ್ಲಿ
ನಾವೂನೂ ಹೆಡೆಯಾಡಿಸೋಣ
ಹೂವೆ ಹೂವು ಹಸಿರೆ ಹಸಿರು || ೫ ||

ಯಾರಿಗೂ ಹೇಳೋಣು ಬ್ಯಾಡ
ನಿದ್ದೆ ಮಾಡಿ ಮೈಯ ಬಿಟ್ಟು
ಮುದ್ದು ಮಾಟದ ಕನಸಿನೂರಿಗೆ
ಸದ್ದು ಮಾಡದೆ ಸಾಗೊಣಂತ
ಯಾರಿಗೂ ಹೇಳೋಣು ಬ್ಯಾಡ || ೬ ||

                                                   - ಅಂಬಿಕಾತನಯದತ್ತ 

3 comments:

  1. ಈ ಹಾಡು ಶಿವಮೊಗ್ಗ ಸುಬ್ಬಣ್ಣ ಅವ್ರ ದ್ವನಿಲಿ ಕೇಳಬೇಕು... ಯಾರದ್ರು ಇದ್ರೆ ಕೊಡಿ......ಇಲ್ಲ ಎಲ್ಲಿ ಸಿಗುತ್ತೆ ತಿಳಿಸಿ

    ReplyDelete
  2. www.kannadaaudio.com ಈ ಸೈಟ್ ನಲ್ಲಿ ಈ ಹಾಡು ಪಡೆಯಲು ಪ್ರಯತ್ನಿಸಿ.

    ReplyDelete
  3. http://www.hungama.com/music/song-yaarigu-helonu-byada/2173021

    ReplyDelete