ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.
Friday, 30 March 2012

ಬಾ ಸವಿತಾ... / Baa Savitaa

ಬಾ ಸವಿತಾ.... ಬಾ ಸವಿತಾ...

ಒಳಗಿನ ಕಣ್ಣನು ಮುಚ್ಚಿಸಿ ಒಮ್ಮೆ
ತಿಳಿವಿಗೆ ಬಣ್ಣವ ಹಚ್ಚಿಸಿ ಒಮ್ಮೆ
ಒಳಿತಲ್ಲದುದೇ ಒಳಿತೆಂಬುದರ ಚಳಕವೆಲ್ಲಕೆ
ವಿನಾಶವ ತಾ....
                                                            ಬಾ ಸವಿತಾ..

ನೆಲೆಯಿಂದ ಹೊರಟು ಅಲೆ ಅಲೆ.. ಅಲೆ ಅಲೆ..
ಛಲತೊಟ್ಟ ಮಲ್ಲವಾಹಿನಿ ಬಾ..
ನಿಲವಿಲ್ಲ ಜಗದಿ ಕತ್ತಲಿಗೆಂದು
ಗೆಲವನು ಸಾರುವ ಭಾಸವ ತಾ....  
                                                             ಬಾ ಸವಿತಾ...

ಓಂ ತತ್ಸವಿತುರ್ವರೇಣ್ಯವೆ೦ಬೆವು
ಅಂತಲ್ಲದೆ ಬೇರೆಯದನು ನಂಬೆವು
ಪಂಥವ ಬೆಳಗಿಸಿ, ನಿರುಪಿಸಿ ಕಾಂಬೆವು
ಶಾಂತ ಸುಂದರ ಶಿವದಾಸವಿತಾ...  
                                                              ಬಾ ಸವಿತಾ...

(ರಚನೆ ಯಾರದೆಂದು ತಿಳಿದಿಲ್ಲ, ತಿಳಿದವರು ಹೇಳಿದರೆ ಸಹಾಯವಾದೀತು).

4 comments:

 1. I think it is Maasti Venkatesha Iyengar. Yello odida nenapu

  ReplyDelete
 2. Naanu nimma blog bagge Prajavani paper (18th May 2012 - Prajavani Metro page 3) nalli odidey. Tumba kushiyaayitu. Kannada bhavageetegaLannu kale haakuva nimma prayatnakke shuba haarike.

  ReplyDelete
 3. ತೇನಸ್ವಿನಿಯವರು ತಿಳಿಸಿದಂತೆ, ರಚನೆ ಮಾಸ್ತಿ ವೆಂಕಟೇಶ ಐಯ್ಯಂಗಾರ್ ರವರದ್ದು, ಕನ್ನಡ ಆಡಿಯೋ.ಕಾಮ್ ನಲ್ಲಿ ಹಾಡು ಕೇಳಿದ್ದೇನೆ.

  ReplyDelete
 4. ಈ ಹಾಡಿನ ಕನ್ನಡ ಆಡಿಯೋ.ಕಾಮ್ ಲಿಂಕ್ ಇಲ್ಲಿದೆ: ಕಸ್ತೂರಿ ಶಂಕರ್ ರವರ ಧ್ವನಿಯಲ್ಲಿ: http://www.kannadaaudio.com/Songs/Bhaavageethe/home/BhaavaSangama.php

  ReplyDelete