ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Saturday 27 August 2011

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ / Ishtu kaala ottigiddu eshtu beretaru

ರಚನೆ: ಹೆಚ್.ಎಸ್. ವೆಂಕಟೇಶ ಮೂರ್ತಿ

ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
ಅರಿತೆವೇನು ನಾವು ನಮ್ಮ ಅಂತರಾಳವ ||

ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ 
ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ

ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ 
ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ 

ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ 
ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....

ಇಷ್ಟು ಕಾಲ ಒಟ್ಟಿಗಿದ್ದೂ..... 

23 comments:

  1. ishtu kaala hudukuttidde ee kavanada lyrics gaagi. nimma site nodi thumba khushiyaayitu! thanks!!

    ReplyDelete
  2. ishtu kaala hudukuttidde ee kavanada lyrics gaagi. nimma site nodi thumba khushiyaayitu! thanks!!

    ReplyDelete
  3. ಸುಂದರವಾದ,ಬಾಂಧವ್ಯದ ಅಂತರವಲೋಕನದ ಗೀತೆ

    ನನಗೆ ತುಂಬ ಇಷ್ಟವಾಯಿತು

    ReplyDelete
  4. ಸುಂದರವಾದ,ಬಾಂಧವ್ಯದ ಅಂತರವಲೋಕನದ ಗೀತೆ

    ನನಗೆ ತುಂಬ ಇಷ್ಟವಾಯಿತು

    ReplyDelete
  5. Sir awesome lyrics love this song all the best for your movie

    ReplyDelete
  6. Sir awesome lyrics love this song all the best for your movie

    ReplyDelete
  7. Sir awesome lyrics love this song all the best for your movie

    ReplyDelete
  8. ಧನ್ಯವಾದಗಳು

    ReplyDelete
  9. ನಿಜವಾಗೂ ತುಂಬ ಚೆನ್ನಾಗಿದೆ಼👌👌👌

    ReplyDelete
  10. ಈ ಪೀಳಿಗೆಗೆ ಅತ್ಯವಶ್ಯಕ

    ReplyDelete
  11. ನಿಜವಾಗಿಯೂ ಇದು ಮನಮುಟ್ಟುವ ಭಾವಗೀತೆ ಇದು ಯಾವ ರಾಗದಲ್ಲಿ ಹೊಮ್ಮಿದೆ?

    ReplyDelete
  12. ಮನದಾಳದಿಂದ ಹೊರಹೊಮ್ಮಿದ ಈ ಭಾವಗೀತೆ ತುಂಬಾ ಸೊಗಸಾಗಿದೆ.

    ReplyDelete
  13. One of the best song in bhavageethe, Really fantastic song.

    ReplyDelete
  14. ಇಷ್ಟು ಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ
    ಅರಿತೆವೇನು ನಾವು ನಮ್ಮ ಅಂತರಾಳವ ||

    ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ
    ನೀರಿನಾಳ ತಿಳಿಯಿತೇನು ಹಾಯಿ ದೋಣಿಗೆ

    ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ
    ಮಣ್ಣ ಮುತ್ತು ದೊರೆಯಿತೇನು ನೀಲಿಬಾನಿಗೆ

    ಸಾವಿರಾರು ಮುಖದ ಚೆಲುವ ಹಿಡಿದು ತೋರಿಯೂ
    ಒಂದಾದರೂ ಉಳಿಯಿತೇ ಕನ್ನಡಿಯ ಪಾಲಿಗೆ....

    ಇಷ್ಟು ಕಾಲ ಒಟ್ಟಿಗಿದ್ದೂ....

    ReplyDelete
  15. ನಮ್ಮವರ ಮನಸ್ಥಿತಿಯನ್ನು ಅರಿಯಲು ತುಂಬಾ ಕಷ್ಟ ಪಡಬೇಕಾಗುತ್ತದೆ... ಕೊನೆಗೆ ಅದು ಸಾಧ್ಯನಾ ..? ಅನ್ನೋದನ್ನ HSV ಅವ್ರು ತುಂಬಾ ಚೆನ್ನಾಗಿ ಈ ಕವಿತೆಯ ಮುಖಾಂತರ ವರ್ಣನೆ ಮಾಡಿದ್ದಾರೆ... ,,,☺️☺️

    ReplyDelete
  16. ಸಣ್ಣ ಸಣ್ಣ ವಿಷಯಗಳಿಗೆಲ್ಲ emotional breakdown ಆದಾಗಲೆಲ್ಲ‌ ಈ ಹಾಡು ಕೇಳಿದರೆ. ಅದೇ ಸಾಂತ್ವನ.

    ReplyDelete
  17. This comment has been removed by the author.

    ReplyDelete
  18. These lines never get old!
    Vasu whose bio is written down there was my mother's friend from Manasa Gangotri University. I have always been curious to meet her in person listening to my mother's interactions with Vasu. I respect her for what she was and what she did. I regret to say that I couldn't meet her before her demise.

    ReplyDelete
  19. Amazing song one of fav 😍🥰

    ReplyDelete