ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 29 August 2011

ಅಮ್ಮ ನಿನ್ನ ಎದೆಯಾಳದಲ್ಲಿ / Amma ninna edeyaaladalli

ಅಮ್ಮ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು 
ಮಿಡುಕಾಡುತಿರುವೆ ನಾನು |
ಕಡಿಯಲೋಲ್ಲೆ ನೀ ಕರುಳ ಬಳ್ಳಿ ಒಲವೂಡುತಿರುವ ತಾಯೆ 
ಬಿಡದ ಭುವಿಯ ಮಾಯೆ ||

ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ 
ದೂಡು ಹೊರಗೆ ನನ್ನ |
ಓಟ ಕಲಿವೆ ಒಳನೋಟ ತಿಳಿವೆ ನಾ ಕಲಿವೆ ಊರ್ಧ್ವಗಮನ 
ಓ ಅಗಾಧ ಗಗನ ||

ಮೇಲೆ ಹಾರಿ ನಿನ್ನ ಸೆಳೆತ ಮೀರಿ ನಿರ್ಭಾರ ಸ್ಥಿತಿಗೆ ತಲುಪಿ 
ಬ್ರಹ್ಮಾಂಡವನ್ನೇ ಬೆದಕಿ |
ಇಂಧನ ತೀರಲು ಬಂದೇ ಬರುವೆ ಮತ್ತೆ ನಿನ್ನ ತೊಡೆಗೆ 
ಮೂರ್ತ ಪ್ರೇಮದೆಡೆಗೆ || 

                                                       - ಬಿ. ಆರ್. ಲಕ್ಷ್ಮಣ ರಾವ್

15 comments:

  1. preethiya vasu.. nimma kanasugalella nanasagali..

    ReplyDelete
    Replies
    1. ಪ್ರೀತಿಯ ಇಂಚರ, ನಿಮ್ಮ ಹಾರೈಕೆಗೆ ನಾನು ಆಭಾರಿ, ಧನ್ಯವಾದಗಳು - ವಸು.

      Delete
  2. athamiya vasu..mathigintha mownavee channa.."mowna mathadidhastu mathu mathadalaradhu"..

    ReplyDelete
    Replies
    1. "Nija adare aa mounada maatannu artha maadikolluvavaru bahala kadime" -Vasu

      Delete
  3. “ಅಮ್ಮಾಯೆಂಬ ಮಾತಿಗಿಂತ ಬೇರೆ ಮಂತ್ರ ಯೆಲ್ಲಿದೆ, ಆದ ಕಾಣುವ ಶಾಂತಿ ಕಾಂತಿ ಯಾವತಾರೆ ರವಿಗಿದೆ” ಈ ಗೀತೆಯು ತಮ್ಮ ಬ್ಲಾಗ್ ನಲ್ಲಿ ಬರಲಿ

    ReplyDelete
    Replies
    1. Vasu nim article prajavani paper nale odi tumbha ne kushi aithu, you done very good job, Congrates keep it up.

      Delete
    2. Prajavani papernal yavatree bandittu, nangottilla kanree.. please yavattin paper anta yaradru helteera - vasu

      Delete
    3. nanige aa article odida malene gothu agidu ee blog, nanu check madi helthini yava date publish antha, nanu aa article na scan madi itukodidini. & special thank for updating amma yembha mathigintha.

      Delete
  4. Prabhu; ಅಮ್ಮ ಎಂಬ ಮಂತ್ರ ಈಗ ನನ್ನ ಕಣಜವನ್ನು ಸೇರಿದೆ. ನೋಡಿ - ವಸು. (http://kannadabhavageetegalu.blogspot.in/2012/05/blog-post_22.html)

    ReplyDelete
  5. Thanks Vasu for this wonderful lyrics and many other bhaavageethe lyrics.
    One mistake tough: It is olavooduthirava thaayi not odamooduthiruva thaayi.

    ReplyDelete
  6. amma ennalu koti punyavu avala thyagake sati ellavu

    ReplyDelete
  7. This comment has been removed by the author.

    ReplyDelete