ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Friday 2 March 2012

ಅಗಣಿತ ತಾರಾ ಗಣಗಳ ನಡುವೆ / Aganita taaraganagala naduve

ಅಗಣಿತ ತಾರಾ ಗಣಗಳ ನಡುವೆ
        ನಿನ್ನನೆ ಮೆಚ್ಚಿದೆ ನಾನು.
ನನ್ನೀ ಜೀವನ ಸಮುದ್ರ ಯಾನಕೆ
        ಚಿರ ಧ್ರುವ ತಾರೆಯು ನೀನು.

ಇಲ್ಲದ ಸಲ್ಲದ ತೀರಗಳೆಡೆಗೆ
        ಹೊರಡುತ ಬಳಲಿದರೇನು.
ದಿಟ್ಟಿಯು ನಿನ್ನೊಳು ನೆಟ್ಟರೆ ತಾನು
        ತೀರವ ಸೇರೆನೆ ನಾನು?


ಚಂಚಲವಾಗಿಹ  ತಾರಕೆಗಳಲಿ
        ನಿಶ್ಚಲನೆಂದರೆ ನೀನೆ.
ಮಿಂಚಿ ಮಿನುಗುತಿಹ ನಶ್ವರದೆದೆಯಲಿ
        ಶಾಶ್ವತನೆಂದರೆ ನೀನೆ.

                                                - ಕುವೆಂಪು

(ನನಗೆ ತಿಳಿದಿರುವ ಮಟ್ಟಿಗೆ, ಇದರ ಮೂಲ ರಚನೆಕಾರ ಶೇಕ್ಸ್ಪಿಯರ್. ಅವನ ಸಾನೆಟ್ 116 ಆಧರಿಸಿ ಕವಿ ಇದನ್ನು ಕನ್ನಡಕ್ಕೆ ತಂದಿದ್ದಾರೆ). ಸಾನೆಟ್ ಇಲ್ಲಿದೆ - 

SONNET 116

Let me not to the marriage of true minds
Admit impediments. Love is not love
Which alters when it alteration finds,
Or bends with the remover to remove:


O no! it is an ever-fixed mark
That looks on tempests and is never shaken;
It is the star to every wandering bark,
Whose worth's unknown, although his height be taken.


Love's not Time's fool, though rosy lips and cheeks
Within his bending sickle's compass come:
Love alters not with his brief hours and weeks,
But bears it out even to the edge of doom.


   If this be error and upon me proved,
   I never writ, nor no man ever loved. 


                                                    - shakespeare

9 comments:

  1. ನಮಸ್ತೆ... ನಂಗೆ ತಿಳಿದ ಪ್ರಕಾರ ಇದು sonnet 116 ನ ಅನುವಾದ...ನೀವು 114 ಎಂದು mention ಮಾಡಿದ್ದೀರಿ...

    ReplyDelete
    Replies
    1. ಹೌದು. ನಾನೇ ತಪ್ಪಾಗಿ ಬರೆದಿದ್ದೆ. ಈಗ ತಿದ್ದಿದ್ದೇನೆ. ನಿಮ್ಮ ದೆಸೆಯಿಂದ ತುಂಬಾ ರಿಪೇರಿ ಆಯಿತು ಕಣ್ರೀ ನನ್ ಬ್ಲಾಗ್ ಗೆ. Thank you. ಹೀಗೆ ಗಮನಿಸ್ತಿರಿ. ತಪ್ಪಾದರೆ ಕಿವಿ ಚಿವುಟಿ. ತಿದ್ದಿಕೊಳ್ಳುತ್ತೇನೆ. ಹಾ, ಆ ಸಾನೆಟ್ 116, ಅದನ್ನೂ ಸೇರಿಸಿದ್ದೇನೆ ಪೋಸ್ಟ್ ನಲ್ಲಿ. ನೋಡಿ. - ವಸು.

      Delete
    2. ಬಹಳ ವ್ಯತ್ಯಾಸ ಇದೆ. ನನಗೆ ಹಾಗೆ ಅನಿಸುತಿಲ್ಲ. ಕುವೆಂಪು ಕವಿತೆ has high values, I don't think its translated

      Delete
  2. Very nice to see your writings. Great.

    ReplyDelete
  3. Anyone who is bilingual(Kannada and English) can see that Kuvempu's re-telling is more beautiful and meaningful. Not to disrespect Shakespeare one bit. The original is a simple sonnet about true love. The translation is multi layered, it could be about true love, your true calling in life, or the beacon of wisdom in your life or simply a beautiful VAST natural formation(Mountain or River or a lake or Ocean) that inspires you.

    ReplyDelete
  4. Dear Vasu, Rashtrakavi Kuvempu was a Realized being and a patriot. He did not copy anyone's work. Please remove any mention of Shakespeare from this blog including comments (and mine). Lovingly, Her Holiness Supreme Being Jyo Aadarsh P.S. You need to add Ninnedege baruvaga to this collection.

    ReplyDelete
  5. This song is written by kuvempu on his chosen ideal Ramakrishna Paramahamsa.

    ReplyDelete
  6. Let's respect the native knowledge, wisdom of our literatures, poets, philosophers.... Shakespeare is great....but that doesn't n shouldn't dim our people... We need to have faith in originality of our personalities.....In have been xposed to more of western literature than to our own through curriculum...Time to set it straight..

    ReplyDelete
  7. Some words are different fm original...
    ditteyu ninnolu nettire kadege, guriyanu serene nanu

    Minchi mulugutiha....not minugutiha

    ReplyDelete