ಸಂಗೀತ, ಗಾಯನದೊಡನೆ ಭಾವಗೀತೆಗಳನ್ನು ಒದಗಿಸುವ ಅನೇಕ ಅಂತರ್ಜಾಲದ ತಾಣಗಳಿದ್ದರೂ ಸಹ ಕೇವಲ ಭಾವಗೀತೆಗಳ ಸಾಹಿತ್ಯಕ್ಕೆ ಮೀಸಲಾದ ತಾಣವಿರುವುದೇ? ತಿಳಿಯದು. ಆದರೆ ಎಷ್ಟೋ ಬಾರಿ ಇಲ್ಲಿ ಅಲೆಯುತ್ತ ಕವಿತೆಗಳ ಸಾಹಿತ್ಯಕ್ಕಾಗಿ ಅರಸಿದಾಗ ತೃಪ್ತಿಯಾಗುವಂತಹ ಫಲಿತಾಂಶ ನನಗಂತೂ ದಕ್ಕಿಲ್ಲ. ಆದ್ದರಿಂದಲೇ ಈ ಪುಟ್ಟ ಪ್ರಯತ್ನ. ಭಾವಗೀತೆಗಳ ಯಾವುದಾದರು ಸಾಲುಗಳು ಇಲ್ಲಿ ತಪ್ಪಾಗಿ ಬರೆಯಲ್ಪಟ್ಟಿದ್ದರೆ ತಿಳಿಸಿ, ಎಷ್ಟೋ ಗೀತೆಗಳು ರಚನಕಾರರ ಹೆಸರಿಲ್ಲದೆ ಹಾಗೆ ಬರೆಯಲ್ಪಟ್ಟಿವೆ, ತಿಳಿದಿದ್ದವರು ಅದನ್ನು ತಿದ್ದಬಹುದು. ಈ ಸಣ್ಣ ಪ್ರಯತ್ನದ ಬಗ್ಗೆ ನಿಮ್ಮ ಒಂದು ಚಿಕ್ಕ ಅಭಿಪ್ರಾಯವನ್ನು ತೇಲಿಬಿಟ್ಟರೆ ಮುದವೆನಿಸುವುದು.




Monday 3 September 2012

ನೀ ಹೀಂಗ ನೋಡಬ್ಯಾಡ ನನ್ನ / Nee hinga nodabyada nanna

ನೀ ಹೀಂಗ ನೋಡಬ್ಯಾಡ ನನ್ನ
ನೀ ಹೀಂಗ ನೋಡಿದರ ನನ್ನ ತಿರುಗಿ ನಾ ಹ್ಯಾಂಗ ನೋಡಲೇ ನಿನ್ನ.

ಸಂಸಾರ ಸಾಗರದಾಗ ಲೆಕ್ಕವಿರದಷ್ಟು ದುಃಖದ ಬಂಡಿ
ನಾ ಬಲ್ಲೆ ನನಗೆ ಗೊತ್ತಿಲ್ಲದಿದ್ದರೂ ಎಲ್ಲಿ ಆಚೆಯಾ ದಂಡಿ
ಮಲಗಿರುವ ಕೂಸು ಮಲಗಿರಲಿ ಅಲ್ಲಿ, ಮುಂದಿನದು ದೇವರ ಚಿತ್ತ
ನಾ ತಡೀಲಾರೆ ಅದು, ಯಾಕ ನೋಡತೀ ಮತ್ತ ಮತ್ತ ಇತ್ತ?

ತಂಬಲs ಹಾಕದ ತುಂಬ ಕೆಂಪು ಗಿಡಗಡಕಹಣ್ಣಿನ ಹಾಂಗ
ಇದ್ದಂಥ ತುಟಿಯ ಬಣ್ಣೆತ್ತ ಹಾರಿತು? ಯಾವ ಗಾಳಿಗೆ, ಹೀಂಗ
ಈ ಗದ್ದ, ಗಲ್ಲ, ಹಣಿ, ಕಣ್ಣುಕಂಡು ಮಾರೀಗೆ ಮಾರಿಯ ರೀತಿ
ಸಾವನs ತನ್ನ ಕೈ ಸವರಿತಲ್ಲಿ, ಬಂತೆsನಗ ಇಲ್ಲದ ಭೀತಿ

ಧಾರೀಲೆ ನೆನೆದ ಕೈ ಹಿಡಿದೆ ನೀನು, ತಣ್ಣsಗ ಅಂತ ತಿಳಿದು
ಬಿಡವೊಲ್ಲಿ ಇನ್ನುನೂ, ಬೂದಿಮುಚ್ಚಿದ ಕೆಂಡ ಇದಂತ ಹೊಳೆದು
ಮುಗಿಲsನ ಕಪ್ಪರಿಸಿ ನೆಲಕ ಬಿದ್ದರ ನೆಲಕ ನೆಲಿ ಎಲ್ಲಿನ್ನs
ಆ ಗಾದಿ ಮಾತು ನಂಬಿ, ನಾನು ದೇವರಂತ ತಿಳಿದಿಯೇನ ನೀ ನನ್ನ.

ಇಬ್ಬನ್ನಿ ತೊಳೆದರೂ ಹಾಲು ಮೆತ್ತಿದಾ ಕವಳಿಕಂಟಿಯಾ ಹಣ್ಣು
ಹೊಳೆ ಹೊಳೆವ ಹಾಂಗ ಕಣ್ಣಿರುವ ಹೆಣ್ಣ, ಹೇಳು ನಿನ್ನವೇನ ಈ ಕಣ್ಣು?
ದಿಗಿಲಾಗಿ ಅನ್ನತದ ಜೀವ ನಿನ್ನ ಕಣ್ಣಾರೆ ಕಂಡು ಒಮ್ಮಿಗಿಲs
ಹುಣ್ಣವೀ ಚಂದಿರನ ಹೆಣ ಬಂತೊ ಮುಗಿಲಾಗ ತೇಲತ ಹಗಲ!

ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

                                                                                       - ಅಂಬಿಕಾತನಯದತ್ತ 

25 comments:

  1. This comment has been removed by the author.

    ReplyDelete
  2. nakkyaaka marasathi dukkha? kha mahaaprana alwa?
    danyavadagalu.,
    chethana.,

    ReplyDelete
  3. Dear vasu,

    This song written by Dharabhendre not from ambikatanayadatta. please check it again. Thank you.

    ReplyDelete
    Replies
    1. Ambikatanayadatta is kavyanama of Shr. Da Ra Bendre

      Delete
    2. Ambikatanayadatta is Onother name of Dattatreya Ramachandra Bendre... Amd that name was used by himself...

      Delete
    3. ದ ರಾ ಬೇಂದ್ರೆಯವರ ಕಾವ್ಯ ನಾಮ ಅಂಬಿಕಾತನಯದತ್ತ

      Delete
    4. ಅಂಬಿಕಾತನಯದತ್ತ ಎನ್ನುವುದು ದ.ರಾ.ಬೇಂದ್ರೆ ಅವರ ಕಾವ್ಯನಾಮ (ಅಂಬಿಕಾ ತನಯ(ಮಗ) ದತ್ತ (ದತ್ತಾತ್ರೇಯ))

      Delete
  4. Dear vasu,

    This song written by Dharabhendre not from ambikatanayadatta. please check it again. Thank you.

    ReplyDelete
    Replies
    1. Rajashekar kadlli Sir, Hope you are fine. I think you are getting confused here. Each and every person who know a little bit about Kannada poetry will be well aware of the fact that "Ambikatanayadatta" is the pen name of Varakavi Sri. Dattatreya Ramachandra Bendre. Please check again & correct your confusion. Thank you - Vasu

      Delete
    2. Vasu, i am fine and hope you too fine. I am sorry i was confuesed. You are right that is pen name. Thank you for continues writing. I am getting all kind of songs which i would expected.

      Thank you.
      Rajashekar kadlli

      Delete
  5. My favorite song, difficult to understand the meaning and inspiration behind this song. looks sad song, when husband in deep trouble.

    ReplyDelete
  6. lyrics mistake is there .

    ReplyDelete
  7. Please let us know the context in which Da Ra Bendre wrote this one

    ReplyDelete
    Replies
    1. ತಾಯಿ ಮಗುವನ್ನ ಕಳೆದುಕೊಂಡಿದ್ದಾಳೆ, ತಂದೆ ಇಂತಹ ದುಃಖದ ಮಡುವಿನಲ್ಲಿದ್ದರೂ ಹೆಂಡತಿಯನ್ನು ಸಂತೈಸುವ ಸಂದರ್ಭ. ಇಂತಹ ಸಂದಿಗ್ಧ ಪರಿಸ್ತಿತಿಯಲ್ಲಿ ಬೇಂದ್ರೆ ಸಿಲುಕಿದ್ದಾಗ ಅವರ ಲೇಖನಿಯಿಂದ ಬಂದ ಮುತ್ತಿನ ಸಾಲುಗಳೇ ಕನ್ನಡ ಸಾಹಿತ್ಯ ಲೋಕದ ಉತ್ಕೃಷ್ಟ ಶೋಕಗೀತೆ “ನೀ ಹಿಂಗ ನೋಡ ಬ್ಯಾಡ ನನ್ನ”.

      Delete
    2. i think this poem comes at the time of death of his son

      Delete
  8. Can someone explain me the meaning of this. I can feel the intense pain in these words. But, unable to connect everything and understand it completely -

    ನಿನ ಕಣ್ಣಿನ್ಯಾಗ ಕಾಲೂರಿ ಮಳೆಯು, ನಡ ನಡಕ ಹುಚ್ಚನಗಿ ಯಾಕ?
    ಹನಿ ಒಡೆಯಲಿಕ್ಕೆ ಬಂದಂಥ ಮೋಡ ತಡಧಾಂಗ ಗಾಳಿಯ ನೆವಕ
    ಅತ್ತಾರ ಅತ್ತುಬಿಡು, ಹೊನಲು ಬರಲಿ, ನಕ್ಯಾಕ ಮರಸತೀ ದುಕ್ಕ?
    ಎವೆಬಡಿಸಿ ಕೆಡವು, ಬಿರಿಗಣ್ಣು ಬ್ಯಾಡ, ತುಟಿಕಚ್ಚಿ ಹಿಡಿಯದಿರು ಬಿಕ್ಕ

    ReplyDelete
    Replies
    1. ಬಹಳ ಚುಟುಕಾಗಿ ಉತ್ತರಿಸುತ್ತೇನೆ. ಎರಡು ವರ್ಷ ಕಳೆದರೂ ಯಾರೂ ಉತ್ತರಿಸದೆ ಇದ್ದದ್ದು ನೋಡಿ ಬರೆಯುತ್ತಿದ್ದೇನೆ. ಮಗುವನ್ನು ಕಳೆದುಕೊಳ್ಳುತ್ತಿರುವ ತಾಯಿಯ ದುಃಖ ಹೇಳತೀರದಾಗಿದೆ. ಆದರೆ ಅದನ್ನು ಗಂಡನ ಎದುರಿಗೆ ತೋರಿಸಿಕೊಳ್ಳಲೂ ಇಷ್ಟಪಡದ ಆಕೆ ಕಣ್ಣಿನಲ್ಲಿ ಇನ್ನೇನು ಧುಮ್ಮಿಕ್ಕಬೇಕೇಂಬ ಆತುರದಲ್ಲಿರುವ ಕಣ್ಣೀರು ತುಂಬಿ ನಿಂತಿದ್ದರೂ, ಮಾತನಾಡುತ್ತ ನಡುನಡುವೆ ವಿನಾಕಾರಣ ನಗುತ್ತಾ ತನ್ನ ದುಃಖವನ್ನು ಮರೆಮಾಚಲೆತ್ನಿಸಿದ್ದಾಳೆ. ಅದಕ್ಕೋಮ್ದು ಉಪಮೆ ಇಲ್ಲಿ! ಮಳೆಯ ಹನಿಯನ್ನು ಹೊತ್ತ ಮೋಡ ಭಾರಿಯಾಗಿ ಇನ್ನೇನು ಬಿರಿದು ಮಳೆ ಸುರಿಯಬೇಕು ಎನ್ನುವಾಗ ಎಲ್ಲಿಂದಲೋ ಬಂದ ಗಾಳಿಯ ನೆಪವನ್ನು ಕೊಟ್ಟು ದೂರಹೋಗುತ್ತದೆ. ಅದಕ್ಕೇ ಕವಿ ಹೇಳುತ್ತಿದ್ದಾರೆ. ಅಳಬೇಕೆನ್ನಿಸಿದರೆ ಅತ್ತುಬಿಡು, ಕಣ್ಣೀರಿನ ಮೂಲಕ ನಿನ್ನ ದುಃಖ ಹರಿದುಹೋಗಲಿ. ಅದು ಬಿಟ್ಟೂ ನಕ್ಕು ಅದನ್ನು ಮರೆಸುವ ವ್ಯ್ರ್ಥ ಪ್ರಯತ್ನವನ್ನು ಏಕೆ ಮಾಡುತ್ತಿದ್ದೀಯೆ? ಹೃದಯದ ಬಡಿತ ಏರುಪೇರಾಗಿ, ಬಿಟ್ಟಕಣ್ಣು ಬಿಟ್ಟಂತೆ ಇದ್ದು ತುಟಿಕಚ್ಚಿ ಹಿಡಿದು ಬರುತ್ತಿರುವ ಬಿಕ್ಕನ್ನು ನಿಲ್ಲಿಸಬೇಡ . ತಾನು ಸ್ತಬ್ಧವಾಗಿರುವುದರಿಂದ ಯಾರಿಗೂ ತನ್ನ ನೋವು ಕಾಣುವುದಿಲ್ಲ ಎಂದುಕೊಂಡಿರುವುದು ತಪ್ಪು. ಅದು ತಮ್ಮ ಕಣ್ಣಿಗೆ ಗೋಚರವಾಗಿದೆ ಎಂದು ಕವಿ ಹೇಳುತ್ತಿದ್ದಾರೆ. ಇಷ್ಟು ಈಗ ಇದಕ್ಕೆ ಸಾಕು ಎಂದುಕೊಳ್ಳುತ್ತೇನೆ. ಇನ್ನೂ ಈಗಲೂ ಇದರ ಅರ್ಥಕ್ಕಾಗಿ ಹುಡುಕುತ್ತಿದ್ದರೆ ಗಮನಿಸಿ.

      Delete
  9. Do you want meaning in kannada sir?

    ReplyDelete